ರೋಗಿಗಳನ್ನು ನಿರೋಗಿಯನ್ನಾಗಿ ಮಾಡಲು ಹಗಲಿರುಳು ಶ್ರಮಿಸುವ ದಾದಿಯರ ಸೇವೆ ಶ್ಲಾಘನೀಯ; ಡಾ.ಎಸ್ ಸಿ ಧಾರವಾಡ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದೆಲ್ಲಡೆ ಹಬ್ಬಿರುವ ಕೊರೊನಾ ಎರಡನೇ ಅಲೇಯ ಹಿನ್ನೆಲೆಯಲ್ಲಿ ದಾದಿಯರು ತಮ್ಮ ಜೀವದ ಹಂಗನ್ನು ತೂರೆದು ಸೇವೆಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಹೇಳಿದ್ದಾರೆ.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ರೋಗಿಗಳನ್ನು ಅತಿ ಹತ್ತಿರದಿಂದ ಅವರ ಆರೋಗ್ಯ ಕಾಪಾಡುತ್ತಾ, ಅವರನ್ನು ಪ್ರೀತಿ-ವಿಶ್ವಾಸದಿಂದ ಕಾಣುತ್ತಾ, ಅವರನ್ನು ನಿರೋಗಿಯಾಗಿ ಮಾಡುವದರಲ್ಲಿ ಹಗಲಿರುಳು ಶ್ರಮಿಸುತ್ತೀರಿ, ಇದು ನಿಮ್ಮ ಸೇವಾ ಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ. ಈ ವರ್ಷ ವಿಶ್ವ ದಾದಿಯರ ದಿನದ ಅಂಗವಾಗಿ “ಎಲ್ಲರ ಭವಿಷ್ಯದ ಆರೋಗ್ಯ ಕಾಪಾಡುವ ನಾಯಕತ್ವದ ಧ್ವನಿ” ಎಂದು ದಾದಿಯರ ಅದ್ವಿತೀಯ ಸೇವೆಯನ್ನು ಗುರುತಿಸಿ ಘೋಷವಾಕ್ಯವನ್ನು ಹೊರಡಿಸಿದೆ. ಇಂದಿನ ಕೋರೊನಾ ಭೀತಿಯ ಸಂದರ್ಭದಲ್ಲೂ ಸಹ ನಮ್ಮ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ಅಂಜದೇ ಸೇವೆ ಸಲ್ಲಿಸುತ್ತಿರುವ ನಿಮಗೆ ಹೃತ್ಪೂರ್ವಕ ವಂದನೆಗಳು ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ದಾದಿಯರಿಗೆ ಗುಲಾಬಿ ಹೂವು ನೀಡುತ್ತ ಅವರ ಸೇವೆಗೆ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಹೆಸರಾಂತ ವೈದ್ಯ ಡಾ. ಮಹಮ್ಮದ ಜಿಯಾಗುತ್ತಿ ಮಾತನಾಡುತ್ತ ವೈದ್ಯರು ರೋಗಿಗಳ ರೋಗಕ್ಕೆ ಔಷಧಿಗಳನ್ನು ಸೂಚಿಸುತ್ತಾರೆ ಆದರೆ ಹಗಲಿರುಳು ರೋಗಿಯ ರೋಗದ ಬಗ್ಗೆ ತಿಳಿದಿದ್ದರೂ ಯಾವುದೇ ಭೀತಿಯನ್ನಿಟ್ಟುಕೊಳ್ಳದೇ ಅವರನ್ನು ಮಗುವಂತೆ ಕಾಳಜಿವಹಿಸುವ ದಾದಿಯರು ನಿಜಕ್ಕೂ ಮಾತೃ ಸ್ವರೂಪವೆಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತುರ್ತುವಿಭಾಗದ ವೈದ್ಯಾಧಿಕಾರಿ ಡಾ. ಸೌದಾಗರ, ಆಸ್ಪತ್ರೆಯ ನರ್ಸಿಂಗ ಅಧೀಕ್ಷಕಿ ಶ್ರೀಮತಿ ಇಂದುಮತಿ ವಾಘಮಾರೆ ಹಾಗೂ ಆಸ್ಪತ್ರೆಯ ಇನ್ನಿತರೆ ಶುಶ್ರೂಷಕ ಸಿಬ್ಬಂದಿಗಳು ಮತ್ತು ಆಸ್ಪತ್ರೆಯ ಸಹಾಯಕ ಸಿಬ್ಬಂದಿ ವರ್ಗದವರು ಮಾಸ್ಕ ಧರಿಸಿ, ಅಂತರವನ್ನು ಕಾಯ್ದಿರಿಸಿಕೂಂಡು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿ ವಂದಿಸಿದರು.
ಪಡಿತರ ಪಡೆಯಲು ಬೆರಳಚ್ಚು ಬೇಕಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ