Sports

*ಐಪಿಎಲ್ ಪಂದ್ಯ ರದ್ದು ಮಾಡಿದ ಬಿಸಿಸಿಐ*

ಪ್ರಗತಿವಾಹಿನಿ ಸುದ್ದಿ; ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದ್ದು, ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯ ಅರ್ಧದಲ್ಲೇ ರದ್ದು ಮಾಡಲಾಗಿತ್ತು.‌ ಇಂದು ಸಭೆ ನಡೆಸಿದ ಬಿಸಿಸಿಐ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ. 

ಪಾಕಿಸ್ತಾನದಿಂದ ಯಾವುದೇ ದಾಳಿಯ ಸಾಧ್ಯತೆ ಇಲ್ಲದಿದ್ದರೂ ಸಹ ಭಾರತದಲ್ಲಿರುವ ಉಗ್ರರ ಬೆಂಬಲಿಗರು, ಭಯೋತ್ಪಾದಕರ ಬಗ್ಗೆ ಅನುಕಂಪಹೊಂದಿರುವವರು ಹಾಗೂ ಪಾಕಿಸ್ತಾನದ ಪರವಾಗಿ ನಿಲ್ಲುವವರು ಭಯೋತ್ಪಾದಕ ದಾಳಿಯನ್ನು ನಡೆಸಬಹುದೆಂದು ಈ ಕ್ರಮ ವಹಿಸಲಾಗಿದೆ.

ಈಗಾಗಲೇ ಸೂಕ್ಷ್ಮ ಪ್ರದೇಶಗಳಾದ ಜಲಾನಯನ ಪ್ರದೇಶಗಳು, ಅಣೆಕಟ್ಟುಗಳು, ಅಣುಸ್ಥಾವರಗಳು ಮುಂತಾದ ಪ್ರದೇಶಗಳ ಮೇಲೆ ಭಾರತ ಬಿಗಿ ಭದ್ರತೆ ನಿಯೋಜಿಸಿದೆ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ದೇಶದೊಳಗೇ ಇರುವ ಉಗ್ರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 

ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಬಿಸಿಸಿಐ ಐಪಿಎಲ್ ಕ್ರೀಡಾಕೂಟದ ಮುಂದೂಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button