ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ದಾಖಲೆ; ರಾಜ್ಯದಲ್ಲಿ ಇಳಿಮುಖ, ಇಲ್ಲಿ ಮಹಾಸ್ಫೋಟ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಕೊರೋನಾ ಇಳಿಮುಖವಾಗಿದ್ದರೆ ಬೆಳಗಾವಿಯಲ್ಲಿ ಶುಕ್ರವಾರ ಮಹಾಸ್ಫೋಟ ಸಂಭವಿಸಿದೆ.
ಒಂದೇ ದಿನ ಬೆಳಗಾವಿ ನಗರದಲ್ಲಿ 804 ಸೇರಿದಂತೆ ಜಿಲ್ಲೆಯಲ್ಲಿ 1592 ಜನರಿಗೆ ಸೋಂಕು ದೃಢಪಟ್ಟಿದೆ. ನಾಲ್ವರು ಸಾವಿಗೀಡಾಗಿದ್ದಾರೆ.
ಅಥಣಿಯಲ್ಲಿ 135, ಬೈಲಹೊಂಗಲ 26, ಚಿಕ್ಕೋಡಿ 77, ಗೋಕಾಕ 208, ಹುಕ್ಕೇರಿ 137, ಖಾನಾಪುರ 31, ರಾಮದುರ್ಗ 48, ರಾಯಬಾಗ 67, ಸವದತ್ತಿ 50 ಹಾಗೂ ಇತರೆ 9 ಜನರಿಗೆ ಸೋಂಕು ಪತ್ತೆಯಾಗಿದೆ.
ಹುಕ್ಕೇರಿ, ರಾಮದುರ್ಗ, ಗೋಕಾಕ ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. (ಸರಕಾರ ಕೊಡುವ ಅಂಕೆ ಸಂಖ್ಯೆಗೂ ನಿಜವಾದ ಸಾವಿನ ಸಂಖ್ಯೆಗೂ ಅಜಗಜಾಂತರವಿದೆ ಎನ್ನುವ ಆರೋಪವಿದೆ. ಬೆಳಗಾವಿ ಸದಾಶಿವನಗರ ಸ್ಮಶಾನದಲ್ಲೇ ನಿತ್ಯ 15 -20 ಜನರ ಅಂತ್ಯಕ್ರಿಯೆ ನಡೆಯುತ್ತಿದೆ.)
ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯ ಮಿತಿಮೀರು ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ