ಪ್ರಗತಿವಾಹಿನಿ ಸುದ್ದಿ, ಪಣಜಿ: ಗೋವಾ ರಾಜ್ಯದಲ್ಲಿ ಕರ್ಫ್ಯೂ ಲಾಕ್‍ಡೌನ್ ಮೇ 31 ರವೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಕ್ರವಾರ ಮಂತ್ರಿಮಂಡಳ ಬೈಠಕ್‍ನನಂತರ ಲಾಕ್‍ಡೌನ್ ನಿರ್ಣಯವನ್ನು ಘೋಷಿಸಿದರು.
ಗೋವಾ ರಾಜ್ಯಾದ್ಯಂತ ಜೀವನಾವಶ್ಯಕ ವಸ್ತುಗಳ ಮಾರಾಟದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ ವಿವಿಧ ಉದ್ಯೋಗ, ಕಛೇರಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮೀನು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಭಾನುವಾರದ ವರೆಗೆ ರಾಜ್ಯದಲ್ಲಿ ಕರ್ಫ್ಯ್ಯೂ ಲಾಕ್‍ಡೌನ್ ಜಾರಿಯಲ್ಲಿತ್ತು, ಆದರೆ ಸರ್ಕಾರವು ಇದೀಗ ಈ ಅವಧಿಯನ್ನು ಮೇ 31 ರವರೆಗೆ ವಿಸ್ತರಣೆ ಮಾಡಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕರೋನಾ ಸೋಂಕಿತರ ಸಂಖ್ಯೆ ಭಾರಿ ಇಳಿಕೆಯಾಗಿದೆ, ಇಷ್ಟೇ ಅಲ್ಲದೆಯೇ ಸಾವಿನ ಪ್ರಮಾಣ ಕೂಡ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಕೆಲ ದಿನ ಇದೇ ಕಟ್ಟುನಿಟ್ಟಾದ ಕ್ರಮವನ್ನು ಮುಂದುವರೆಸಿದರೆ ಗೋವಾ ರಾಜ್ಯ ಕರೋನಾ ಗೆಲ್ಲಲು ಸಾಧ್ಯ ಎಂದು ಗೋವಾ ಸರ್ಕಾರ ಅಭಿಪ್ರಾಯಪಟ್ಟಿದೆ.
ಶುಕ್ರವಾರ ನಡೆದ ಮಂತ್ರಿಮಂಡಳ ಬೈಠಕ್‍ನಲ್ಲಿ ಕೂಡ ಹಲವು ಸಚಿವರು ರಾಜ್ಯದಲ್ಲಿ ಕರ್ಫ್ಯೂ ಲಾಕ್‍ಡೌನ್ ಅವಧಿಯನ್ನು ವಿಸ್ತರಣೆ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ