Latest

ಪತಿ, ಪತ್ನಿ ಕೊರೋನಾಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೊರೊನಾ ಸೋಂಕು ಹಲವು ಕುಟುಂಬಗಳನ್ನೇ ಬಲಿ ಪಡೆಯುತ್ತಿದೆ. ಕೇವಲ 10 ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರೂ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಮೈಸೂರು  ಖಾಸಗಿ ಸಂಸ್ಥೆಯ ನೌಕರ ( ಕುಟುಂಬದ ವಿನಂತಿಯ ಮೇರೆಗೆ ಹೆಸರು ಪ್ರಕಟಿಸಿಲ್ಲ) ಹಾಗೂ ಅವರ ಪತ್ನಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೋವಿಡ್ ನಿಂದ ಬಳಲುತ್ತಿದ್ದ ಪತಿ ನಿವಾಸದಲ್ಲಿಯೇ ಕ್ವಾರಂಟೈನ್ ಆಗಿದ್ದರು. ಪತಿ ನೋಡಿಕೊಳ್ಳುವಾಗ ಪತ್ನಿಗೂ ಸೋಂಕು ತಗುಲಿದೆ. ಮೇ 18ರಂದು ಪತ್ನಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.

ಇದೀಗ ಪತಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 18 ವರ್ಷದ ಹಾಗೂ 16 ವರ್ಷದ  ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಬೆಳಗಾವಿ: ನಾಲ್ವರ ವಿರುದ್ಧ ಎಫ್ಐಆರ್ ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button