ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನರೇಗಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಲಕ್ಷ್ಮಿ ತಾಯಿ ಫೌಂಡೇಶನ್ ಕಾರ್ಯಕರ್ತರು ಹಿಂಡಲಗಾ ಗ್ರಾಮದಲ್ಲಿ ಮಂಗಳವಾರ ಕಿಟ್ ಗಳನ್ನು ವಿತರಿಸಿದರು.
ಕೋವಿಡ್ ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಜನರ ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಹಲವೆಡೆ ಕಿರಾಣಿ ಸಾಮಗ್ರಿ ಹಾಗೂ ಔಷಧಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಮಂಗಳವಾರ ಹಿಂಡಲಗಾ ಗ್ರಾಮದ ನರೇಗಾದಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಆಹಾರದ ಕಿಟ್, ನೀರಿನ ಬಾಟಲ್, ರೇಷನ್ ಕಿಟ್, ಹೋಮ್ ಐಸೋಲೇಷನ್ ಕಿಟ್, ಮಾಸ್ಕ್, ಸ್ಯಾನಿಟೈಜರ್ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ರಾಹುಲ್ ಉರನಕರ್, ಪರುಶರಾಮ ಕುದ್ರೆಮನಿಕರ್, ಗಜು ಬಾಂಡೆಕರ್, ಅಶೋಕ ಕಾಂಬಳೆ, ಚೇತನಾ ಅಗಸ್ಗೆಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ