ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಹಿಂದೂ ಪರಿಷತ್ – ಬಜರಂಗ ದಳದ ವತಿಯಿಂದ ಇಂದು ಖಡೆ ಬಜಾರಾದಲ್ಲಿ ಆಯುರ್ವೇದಿಕ್ ಕಾಡಾ( ಕಷಾಯ) ಮತ್ತು ಶ್ರೀ ಕಾಡಸಿಧ್ಧೇಶ್ವರ ಸ್ವಾಮೀಜಿ ಕನ್ನೇರಿ ಮಠ ಅವರ ಕರೋನಾ ಬೂಸ್ಟರ್ ಸೇವೆಗೆ ಚಾಲನೆ ನೀಡಲಾಯಿತು.
ಬೆಳಗಾವಿ ನಗರ ಡಿಸಿಪಿ ವಿಕ್ರಮ್ ಅಮಟೆ ಹಾಗೂ ನಾಗನಾಥ ಸ್ವಾಮೀಜಿ ಇವರ ಮತ್ತು ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಪಂಚಾಕ್ಷರಿ ಚೊನ್ನದ, ವಿಶಾಲ ರಾಮಣ್ಣನವರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಖಡೆಬಝಾರ ವ್ಯಾಪಾರಿಗಳಾದ ಸುನಿಲ್ ನಾಯ್ಕ, ವಿಜಯ ಪೋರವಾಲ, ಮುಕೇಶ ಪೊರವಾಲ ಮುಂತಾದವರು ಇದ್ದರು.
ವಿಶ್ವ ಹಿಂದು ಪರಿಷತ್ ಬಜರಂಗದಳದ ವತಿಯಿಂದ ಬೇರೆ ಬೇರೆ ಸಮಾಜದ ಸಹಕಾರದೊದಿಗೆ ಬೆಳಗಾವಿ ನಗರದಲ್ಲಿ 10 ಸ್ಟಾಲ್ ಆರಂಭವಾಗಲಿದೆ ಮತ್ತು ಖಡೇಬಜಾರ, ಶಾಹು ನಗರ್, ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನ, ಹಳೆ ಬೆಳಗಾವಿ ನಾಕಾ ಮತ್ತು ವ್ಯಾಕ್ಸಿನ್ ಡಿಪೋ ಟಿಳಕ್ವಾಡಿ ಯಲ್ಲಿ 5 ಮಳಿಗೆ ಆರಂಭ ಮಾಡಲಾಗಿದೆ ಎಂದು ಬಜರಂಗದಳದ ನಗರ ಸಂಯೋಜಕ ಆದಿನಾಥ ಗಾವಡೆ ವಿವರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ ಮತ್ತೆ ಲಾಕ್ ಡೌನ್ ಬರಬಾರದು ಎಂದರೆ ಪ್ರತಿ ವ್ಯಕ್ತಿ ಪ್ರತಿ ಮನೆ, ಪ್ರತಿ ಊರಲ್ಲಿ ಆಯುರ್ವೇದ ಸಂಜೀವಿನಿ ಕಾಡಾ ಸೇವಿಸಿ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ವ್ಯಾಪಾರಸ್ತರು ಕೂಡ ತಮ್ಮ ಸುತ್ತ ಮುತ್ತ ಕಾಡಾ ಸ್ಟಾಲ್ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ಕೈ ಜೋಡಿಸಬೇಕೆಂದು ಕರೆ ಕೊಟ್ಟರು.
ತಕ್ಷಣ ಅಲ್ಲೆ ಇರುವ ಡಿಸಿಪಿ ವಿಕ್ರಮ್ ಅಮ್ಟೆ ಮತ್ತು ಪಂಚಾಕ್ಷರಿ ಚೊನ್ನದ ಅವರು ತಾವು ಎಲ್ಲಾ ರೀತಿಯ ಸಹಾಯ ಸಹಕಾರ ಕೊಡುತ್ತೇವೆ. ವಿಶ್ವ ಹಿಂದು ಪರಿಷತ್ ಬಜರಂಗದಳ ಮಾಡುವ ಆರೋಗ್ಯ ವರ್ಧಕ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ನಗರ ಅಧ್ಯಕ್ಷರಾದ ಬಸವರಾಜ ಭಾಗೋಜೀ ಸ್ವಾಗತಿಸಿದರು. ಶ್ರೀಕಾಂತ ಕದಂ ಜಿಲ್ಲಾ ಅಧ್ಯಕ್ಷರು, ವಿಭಾಗ ಸಹಕಾರ್ಯದರ್ಶಿ ಅಚ್ಚುತ್ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ, ಜಿಲ್ಲಾ ಮಠ ಮಂದಿರ ಸಂಪರ್ಕ ಪ್ರಮುಖ ಸತೀಶ ಮಾಲೋದೆ, ನಗರ ಕಾರ್ಯದರ್ಶಿ ಹೇಮಂತ್ ಹಾವಳ ಮತ್ತು ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ