ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪೀರವಾಡಿ, ಮನುಚವಾಡಿ, ಪುಟಾನವಾಡಿ, ತಬಕರವಾಡಿ, ಸಂಕಣವಾಡಿ, ನಾಗ್ಯಾನವಾಡಿ, ಯಾದನವಾಡಿ, ಕುಠಾಳಿ, ಹಂದ್ಯಾನವಾಡಿ, ಗ್ರಾಮಕ್ಕೆ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಅಲಿಸಿದರು.
ಈ ವೇಳೆ ಮಾತನಾಡಿದ ಸಂಸದರು, ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಿದ್ದು ಹಂತ ಹಂತವಾಗಿ ಅಭೀವೃದ್ಧಿ ಕಡೆ ಹೆಜ್ಜೆ ಇಡುತ್ತಿದ್ದೇವೆ. ಇದರೊಂದಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಗ್ರಾಮಗಳಲ್ಲಿ ಕೊರೋನಾ ಪರಿಸ್ಥಿತಿ ಹಾಗೂ ಇನ್ನಿತರ ಜನರ ಸಮಸ್ಯೆಗಳನ್ನು ತಿಳಿದುಕೊಂಡಿದ್ದು, ಶೀಘ್ರದಲ್ಲಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಪುಟಾನವಾಡಿಯ ಶ್ರೀ ಲಕ್ಷ್ಮೀ ಮಂದಿರಕ್ಕೆ ಭೇಟಿ ನೀಡಿದ ಸಂಸದರು, ಬಳಿಕ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಶೆಡ್ ಅನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕ ವಿಶ್ವನಾಥ ಕಮತೆ, ಪಿ.ಎಸ್.ಐ ಕೃಷ್ಣವೇಣಿ ಗುರ್ಲಹೊಸೂರ, ನರಸಗೌಡ ಪಾಟೀಲ, ಮಧುಕರ ಪಾಟೀಲ, ರಾಜು ಶಿಂತ್ರೆ, ಬಸವರಾಜ ನೆರಲೆ, ಶೇಖರ ಡುಪರೆ, ಮಹೇಶ ಚೌಗಲೆ, ಪ್ರಕಾಶ ಮಗದುಮ್ಮ, ಅಪ್ಪಾಸಾಬ ಪಾಟೀಲ, ಪುಂಡಲಿಕ ಖೋತ, ಮಹಾವೀರ ಖೋತ, ಧೂಳಪ್ಪಾ ಖಾಮಗೌಡ, ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.
ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ