
ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ಕಾಳಿನದಿಯಿಂದ ಆಹಾರ ಅರಸಿ ಮೊಸಳೆಯೊಂದು ಗ್ರಾಮಕ್ಕೆ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದಲ್ಲಿ ನಡೆದಿದೆ.
ನದಿ ದಡದಿಂದ ಗ್ರಾಮಕ್ಕೆ ಆಗಮಿಸಿದ ಬೃಹದಾಕಾರದ ಮೊಸಳೆ ರಸ್ತೆಯ ಪಕ್ಕದಲ್ಲಿ ಆರಾಮವಾಗಿ ನಡೆದು ಸಾಗಿದೆ. ಗ್ರಾಮದಲ್ಲಿ ಮೊಸಳೆ ಓಡಾಟ ಕಂಡು ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮೊಸಳೆ ಮತ್ತೆ ನದಿಗೆ ಸೇರಿಕೊಂಡಿದೆ.
ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೇ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲಬಾರಿ ಮೊಸಳೆ ಆಗಮಿಸಿದ್ದು ಜನರಲ್ಲಿ ಆತಂಕ ತಂದಿದೆ. ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ಈ ಭಾಗದಲ್ಲಿ ನಡೆದಿದೆ. ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ಇದ್ದು ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿವೆ. ಲಾಕ್ ಡೌನ್ ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿದ್ದರಿಂದ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತ್ತಿವೆ.
ಎರಡು ದಿನದಲ್ಲಿ ಜಾರಕಿಹೊಳಿ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ
ಎಲ್ ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ