Latest

ಭೀಕರ ರಸ್ತೆ ಅಪಘಾತ; ನವ ವಿವಾಹಿತೆ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಮದುವೆಯಾಗಿ ನವ ದಂಪತಿಗಳು ದೇವಸ್ಥಾನಕ್ಕೆಂದು ಹೊರಟಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಧು ಸಾವನ್ನಪ್ಪಿದ್ದು, ವರ ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯರಗಲ್ ಬಿ.ಕೆ.ಗ್ರಾಮದಲ್ಲಿ ನಡೆದಿದೆ.

ಟೆಂಪೋ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದು, ನವ ವಿವಾಹಿತೆ ರಾಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ಮದು ಮಗ ಗಣೇಶ್ ಚೌವ್ಹಾಣ್ ಸೇರಿ 7 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಂಪೋ ಚಾಲಕನ ಅಜಾಗರೂಕತೆಯೇ ಅಘಟನೆಗೆ ಕಾರಣ ಎನ್ನಲಾಗಿದೆ. ಸಿಂದಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಸ್ಫೋಟ ಸದ್ದು; ಬೆಚ್ಚಿಬಿದ್ದ ರಾಜಧಾನಿಯ ಜನತೆ

Related Articles

Back to top button