ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಕೆ ಆರ‍್ ಎಸ್ ನಮ್ಮ ಜೀವನಾಡಿ. ನನಗೆ ಬಂದ ಮಾಹಿತಿ ಆಧರಿಸಿ ನಾನು ಜಲಾಶಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ನನ್ನ ಕರ್ತವ್ಯ. ಕುಮಾರಸ್ವಾಮಿಯವರನ್ನು ಕೇಳಿ ನಾನು ಕೆಲಸ ಮಾಡಬೇಕಿಲ್ಲ ಎಂದು ಕಿಡಿಕಾರಿದದರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನ್ನನ್ನಂತ ನೇರವಂತಿಕೆ ಸಂಸದರನ್ನು ಅವರು ಹಿಂದೆ ನೋಡಿಲ್ಲ. ನನ್ನ ನೇರ ನಡೆ, ನುಡಿ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ನನ್ನ ಅಭಿಪ್ರಾಯ ನಾನು ವ್ಯಕ್ತಪಡಿಸುತ್ತೇನೆ. ನನ್ನ ಕೆಲಸ ನಾನು ಮಾಡುತ್ತೇನೆ. ಇವರ ಹೇಳಿಕೆಗಳಿಂದ ನನಗೆ ತೊಂದರೆಯಾಗಲ್ಲ, ಬದಲಿಗೆ ಇವರಿಗೇ ಮುಳುವಾಗುತ್ತೆ ಎಂದರು.
ಕೆಆರ್ ಎಸ್ ಬಿರುಕು ಬಿಟ್ಟರೆ ಸುಮಲತಾ ಅವರನ್ನೇ ಅಡ್ಡ ಮಲಗಿಸಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರಿಗೆ ಕನಿಷ್ಠ ಜ್ನಾನವೂ ಇಲ್ಲವೇ? ಮಾಜಿ ಸಿಎಂ ಆಗಿ ಅದರಲ್ಲೂ ಎರಡು ಬಾರಿ ಮುಖ್ಯಮಂತ್ರಿಯಾದವರಿಗೆ ತಮ್ಮ ಮಾತಿನ ಮೇಲೆ ಪದ ಬಳಕೆ ಮೇಲೆ ಹಿಡಿತವಿಲ್ಲ ಎಂದ ಅವರ ಸಂಸ್ಕೃತಿಯನ್ನು ತೋರುತ್ತದೆ. ನಾನು ಸಂಸದೆ ಎಂಬುದು ಪಕ್ಕಕ್ಕಿರಲಿ ಆದರೆ ಓರ್ವ ಹೆಣ್ಣುಮಗಳ ಬಗ್ಗೆ ಹಗುರವಾಗಿ, ವೈಯಕ್ತಿಕವಾಗಿ ಮಾತನಾಡುವುದು, ಇಂತಹ ಪದ ಬಳಕೆಗಳನ್ನು ಮಾಡುವುದು ಎಷ್ಟು ಸರಿ? ಇದು ಅವರ ಸಂಸ್ಕಾರ-ಸಂಸ್ಕೃತಿಯನ್ನು ತೀರುತ್ತದೆ. ಚುನಾವಣೆಯಲ್ಲಿನ ಸೋಲಿನಿಂದ ಎರಡು ವರ್ಷಗಳಿಂದ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ಚುನಾವಣೆ ಸಂದರ್ಭದಲ್ಲೂ ನನ್ನ ಮೇಲೆ ಪರಿಣಾಮ ಬಿದ್ದಿಲ್ಲ, ನನ್ನ ಕೆಲಸದ ಮೇಲೂ ಯಾವುದೇ ಪರಿಣಾಮ ಬೀರಲ್ಲ. ಇಂತಹ ಹೇಳಿಕೆಯಿಂದ ಮುಂದಿನ ದಿನಗಳಲ್ಲಿ ತೊಂದರೆ ಯಾರಿಗೆ? ಜನ ಪಾಠ ಕಲಿಸುವುದು ನನಗಲ್ಲ ಇವರಿಗೆ ಎಂದು ಹೇಳಿದರು.
ಕೆಆರ್ ಎಸ್ ಗೆ ಸುಮಲತಾರನ್ನೇ ಅಡ್ಡ ಮಲಗಿಸಬೇಕು; ಹೆಚ್ ಡಿಕೆ ಹೊಸ ವಿವಾದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ