Latest

ಸಿಎಂ ಬಿಎಸ್ ವೈ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ’ಹಮಾರಾ ಕುತ್ತಾ ಹಮಾರಾ ಗಲ್ಲಿಮೇ ಶೇರ್’ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪನವರಾಗಲಿ, ರಾಜ್ಯದ ಬಿಜೆಪಿ ಸಂಸದರಾಗಲಿ ಯಾರೊಬ್ಬರೂ ಕೇಂದ್ರದ ಮುಂದೆ ಮಾತನಾಡುವುದಿಲ್ಲ. ಪ್ರಧಾನಿ ಮೋದಿ ಮುಂದೆ ಇವರೆಲ್ಲರೂ ಮೂಕರಾಗಿದ್ದಾರೆ. ಸಿಎಂ ಬಿಎಸ್ ವೈ ಅವರಂತು ಪ್ರಧಾನಿ ಮೋದಿ ಮುಂದೆ ಉಸಿರನ್ನೂ ಎತ್ತಲ್ಲ. ಇದು ಹೇಗಿದೆ ಎಂದರೆ ’ಹಮಾರಾ ಕುತ್ತಾ ಹಮಾರಾ ಗಲ್ಲಿಮೇ ಶೇರ್’ ಎನ್ನುವಂತಿದೆ ಎಂದು ಟೀಕಾಪ್ರಹಾರ ನಡೆಸಿದರು.

Home add -Advt

ರಾಜ್ಯಕ್ಕೆ ಬರುತ್ತಿರುವ ಅನುದಾನ ಕಡಿತದ ಬಗ್ಗೆ ಪ್ರಶ್ನೆ ಮಾಡಬೇಕು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕುಳಿತು ಚರ್ಚಿಸಿ ರಾಜ್ಯದ ಅನುದಾನವನ್ನು ಕೇಳಿ ತರಬೇಕಲ್ಲವೇ? ಅದನ್ನು ಬಿಟ್ಟು ಸಂಸದರಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಯಾರೊಬ್ಬರೂ ಕೇಂದ್ರ ನಾಯಕರ ಮುಂದೆ ಒಂದು ಮಾತನ್ನೂ ಆಡಲ್ಲ, ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಮುಂದೆ ಪ್ರಸ್ತಾಪಿಸುತ್ತಲೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂಗೆ ಪದ ಬಳಕೆ ಮೇಲೆ ಹಿಡಿತವಿಲ್ಲವೇ?; ಸಂಸದೆ ಸುಮಲತಾ ತಿರುಗೇಟು

Related Articles

Back to top button