ಪ್ರಗತಿವಾಹಿನಿ ಸುದ್ದಿ; ಹಾವೇರಿ: ಆಟವಾಡುತ್ತಿದ್ದಾಗ ಮೊಬೈಲ್ ನ ಹಳೇ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 10 ವರ್ಷದ ಬಾಲಕನ ಬೆರಳುಗಳು ಛಿದ್ರಗೊಂಡಿದ್ದು, ಮುಖಕ್ಕೆ ಗಂಭೀರವಾಗಿ ಗೊಯವಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಮನೆ ಪಕ್ಕದಲ್ಲಿ ಎಸೆದಿದ್ದ ಹಾಳಿಗಿದ್ದ ಮೊಬೈಲ್ ಬ್ಯಾಟರಿ ಹಿಡಿದು ಬಾಲಕ ಆಟವಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. 10 ವರ್ಷದ ಬಾಲಕ ಕಾರ್ತಿಕ್ ನ ಮೂರು ಬೆರಳುಗಳು ತುಂಡಾಗಿದ್ದು, ಮುಖಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗಾಯಾಳು ಬಾಲಕನನ್ನು ತಾಲುಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖಾ ವರದಿ ರೆಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ