ಪ್ರಗತಿವಾಹಿನಿ ಸುದ್ದಿ, ಉಡುಪಿ / ಶಿರಸಿ – ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ನದಿಗಳು ತುಂಬು ಹರಿಯುತ್ತಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು ರೈಲ್ವೆ ಹಳಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ಮುಂಡಗೋಡದ ಶಿಂಗನಹಳ್ಳಿಯಲ್ಲಿ ಮನೆಯೊಂದು ಕುಸಿದುಬಿದ್ದಿದೆ.
ನದಿ ಪಾತ್ರದ ಜನರಿಗೆ ಈಗಾಗಲೆ ಎಚ್ಚರಿಕೆ ನೀಡಲಾಗಿದೆ. ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗಿದೆ.
ಕಳೆದ ೨೪ ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ ೭೫.೪ ಮಿ.ಮೀ, ಭಟ್ಕಳ ೬೩.೪ ಮಿ.ಮೀ, ಹಳಿಯಾಳ ೬.೨ ಮಿ.ಮೀ, ಹೊನ್ನಾವರ ೭೩.೦ ಮಿ.ಮೀ, ಕಾರವಾರ ೮೦.೬ ಮಿ.ಮಿ, ಕುಮಟಾ ೯೧.೮ ಮಿ.ಮೀ, ಮುಂಡಗೋಡ ೧.೨ ಮಿ.ಮೀ, ಸಿದ್ದಾಪುರ ೪೮.೨ ಮಿ.ಮೀ. ಶಿರಸಿ ೨೬.೫ ಮಿ.ಮೀ, ಜೋಯಿಡಾ ೩೪.೦ ಮಿ.ಮೀ, ಯಲ್ಲಾಪುರ ೧೪.೪ ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: ೩೪.೫೦ಮೀ (ಗರಿಷ್ಟ), ೩೦.೪೦ ಮೀ, ೧೭೩೭೩.೦೦ ಕ್ಯೂಸೆಕ್ಸ್ (ಒಳಹರಿವು) ಕ್ಯೂಸೆಕ್ಸ್ ೨೫೦೬೧.೦ (ಹೊರ ಹರಿವು), ಕೊಡಸಳ್ಳಿ: ೭೫.೫೦ ಮೀ ೬೮.೫೫ (ಗರಿಷ್ಟ), ೯೦೪೧ ಮೀ. , ಕ್ಯೂಸೆಕ್ಸ್ (ಒಳ ಹರಿವು), ೯೫೯೨ (ಹೊರ ಹರಿವು), ಸೂಪಾ: ೫೬೪.೦೦ ಮೀ (ಗ), ೫೪೦.೭೦ ಮೀ, ೨೧೧೫೮.೧೩ ಕ್ಯೂಸೆಕ್ಸ್ (ಒಳ ಹರಿವು), ೩೨೦.೬೨೫ ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: ೪೬೮.೩೮ಮೀ (ಗ), ೪೫೮.೩೫ ಮೀ, ೬೯೪.೦೦ ಕ್ಯೂಸೆಕ್ಸ್ (ಒಳ ಹರಿವು) ೦.೦೦ ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: ೪೩೮.೩೮ ಮೀ (ಗ), ೪೩೩.೫೮ ಮೀ, ೧೮೨೪ ಕ್ಯೂಸೆಕ್ಸ್ (ಒಳ ಹರಿವು) ೪೨೬೮.೦ ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: ೫೫.೦೦ ಮೀ (ಗ), ೫೦.೫೭ ಮೀ, ೭೬೩೪.೦೦೦ ಕ್ಯೂಸೆಕ್ಸ್ (ಒಳ ಹರಿವು) ೭೩೫೪.೦೦೦ ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ: ೧೮೧೯.೦೦ ಅಡಿ (ಗ), ೧೭೮೯.೫೫ ಅಡಿ, ೩೪೯೦೫.೦ ಕೂಸೆಕ್ಸ್ (ಒಳ ಹರಿವು) ೨೧೧೬.೩೫ ಕ್ಯೂಸೆಕ್ಸ್ (ಹೊರ ಹರಿವು).
ಝಿಕಾ ಸೋಂಕು : ಅಗತ್ಯ ಮುನ್ನೆಚ್ಚರಿಕೆ ವಹಿಸಿ – ಡಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ