Latest
ಕರ್ತವ್ಯನಿರತ ಪತ್ರಕರ್ತನ ಭೀಕರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಕಂದಹಾರ್: ಕಾರ್ಯನಿರತ ಫೋಟೋ ಜರ್ನಲಿಸ್ಟ್ ಓರ್ವನನ್ನು ತಾಲಿಬಾನ್ ಉಗ್ರರು ಭೀಕರವಾಗಿ ಹತ್ಯೆಗೈದಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.
ರಾಯಟರ್ಸ್ ಸುದ್ದಿಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಹತ್ಯೆಗೀಡಾದ ಪತ್ರಕರ್ತ.
ಕಂದಹಾರ್ ಸ್ಪಿನ್ ಬೋಲ್ಡಕ್ ಪ್ರದೇಶದಲ್ಲಿ ಇಂದು ನಡೆದ ಹಿಂಸಾಚಾರದಲ್ಲಿ ದಾನೀಶ್ ನನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಮೂಲದ ದಾನಿಶ್ ಕಳೆದ ಕೆಲ ದಿನಗಳಿಂದ ಕಂದಹಾರ್ ನಲ್ಲಿನ ಹಿಂಸಾಚಾರದ ಬಗ್ಗೆ ಕವರೇಜ್ ಮಾಡುತ್ತಿದರು. ಕಳೆದ 11 ವರ್ಷಗಳಿಂದ ರಾಯಟರ್ಸ್ ಸುದ್ದಿಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ದರ್ಶನ್ ಹಲ್ಲೆ ಆರೋಪ ಕೇಸ್ ಗೆ ಬಿಗ್ ಟ್ವಿಸ್ಟ್; ನಾನು ದಲಿತ ಅಲ್ಲ, ಬ್ರಾಹ್ಮಣ ಎಂದ ಹೋಟೆಲ್ ಸಿಬ್ಬಂದಿ




