ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಝೀಕಾ ವೈರಸ್ ಕೇರಳದಲ್ಲಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಡಕ್ ಸೂಚನೆ ನೀಡಿದೆ.
ಆಯಾ ಜಿಲ್ಲೆಗಳಲ್ಲಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ / ತಾಲೂಕಾ ಆರೋಗ್ಯ ಕೇಂದ್ರದಲ್ಲಿ 2 ವಾರದಿಂದ ಪ್ರಯಾಣಿಸಿದ ವ್ಯಕ್ತಿಗಳ ರಕ್ತ ಪರೀಕ್ಷೆ ಮಾಡಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚಿಸಿದೆ.
ಝೀಕಾ ರೋಗವು ಡೆಂಗಿ ರೋಗದಂತೆ ವೈರಸ್ ಹೊಂದಿದ ಈಡಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗುತ್ತಿದ್ದು, ಹೆಚ್ಚಾಗಿ ಗರ್ಭೀಣಿಯರಿಗೆ ಹಾಗೂ ಭ್ರೂಣ/ಹುಟ್ಟುವ ಮಗುವಿಗೆ ಮೈಕ್ರೋಕೆಪೆ ಆಗುತ್ತದೆ. ಆದ್ದರಿಂದ ಪ್ರತಿವಾರ ಎಲ್ಲ ಖಾಸಗಿ/ಸರ್ಕಾರಿ ಸಂಸ್ಥೆಗಳು ವರದಿ ನೀಡಲು ಸೂಚಿಸಿಲಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 220 ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರಿಗೆ ಜುಲೈ 14 ರಂದು ತರಬೇತಿ ನೀಡಲಾಗಿದೆ. ಸ್ವಚ್ಛ ಪರಿಸರದಿಂದ ಸಮರ್ಪಕ ಘನತಾಜ್ಯ ವಿಲೇವಾರಿಯಿಂದ ಈ ಸೊಳ್ಳೆಯನ್ನು ದೂರ ಇಡಬಹುದಾಗಿದೆ ಎಂದು ಡಾ. ಎಂ. ಎಸ್. ಪಲ್ಲೇದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ವಿದೇಶಿ ಪ್ರಜೆಗಳ ಗಡಿಪಾರು – ರಾಜ್ಯ ಸರಕಾರದ ಮಹತ್ವದ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ