Kannada NewsKarnataka NewsLatest

ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ರಾಜ್ಯ ಹೆದ್ದಾರಿಗಳ ಪರಿವರ್ತನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳಿಂದ ಹೊಸ ರಾಜ್ಯ ರಸ್ತೆಗಳನ್ನು ರಾಷ್ಟ್ರೀಯ ಮಹಾಮಾರ್ಗಗಳಾಗಿ ಘೋಷಿಸಲು ಭಾರತ ಸರ್ಕಾರದ ಸಾರಿಗೆ ಸಚಿವಾಲಯವು ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಲೇ ಇದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಅಭಿವೃದ್ಧಿ ಸಚಿವ ನಿತೀನ ಜೈರಾಮ ಗಡಕರಿ ಅವರು ಲೋಕಸಭೆಯಲ್ಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದ್ದಾರೆ.

ಸಂಪರ್ಕದ ಅವಶ್ಯಕತೆ, ಅಂತರ, ಆದ್ಯತೆ ಮತ್ತು ಅನುದಾನದ ಲಭ್ಯತೆಗೆ ಅನುಗುಣವಾಗಿ ಕಾಲಕಾಲಕ್ಕೆ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿ ಘೋಷಿಸಲು ಸಚಿವಾಲಯವು ಪರಿಗಣಿಸುತ್ತಿದೆ.

ಈ ಹಿನ್ನೆಲೆಯಲ್ಲಿ ೨೦೧೮-೧೯ ನೇ ಸಾಲಿನಲ್ಲಿ ಕರ್ನಾಟಕದಲ್ಲಿ ೧೩೨ ಕಿಮಿ, ೨೦೧೯-೨೦ ರಲ್ಲಿ ಮಹಾರಾಷ್ಟ್ರದಲ್ಲಿ ೧೭೪ ಕಿಮಿ, ೨೦೨೦-೨೧ ನೇ ಸಾಲಿನಲ್ಲಿ ಮಹಾರಾಷ್ಟ ರಾಜ್ಯದಲ್ಲಿ ೨೬೫ ಮತ್ತು ಕರ್ನಾಟಕದಲ್ಲಿ ೯೨ ಕಿಮಿ ರಾಜ್ಯ ಹೆದ್ದಾರಿಗಳನ್ನು ಮತ್ತು ಪ್ರಸಕ್ತ ೨೦೨೧-೨೨ ನೇ ಸಾಲಿನಲ್ಲಿ ಕರ್ನಾಟಕದ ರಾಜ್ಯ ಹೆದ್ದಾರಿ ವ್ಯಾಪ್ತಿಯ ೨೨೦ ಕಿಮಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಧಿಸೂಚಿಸಲಾಗಿದೆ ಎಂದರು.

ಕಳೆದ ೩ ವರ್ಷಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಪ್ರತ್ಯೇಕವಾದ ಪ್ರಸ್ತಾವನೆಗಳಿಗೆ ಯಾವದೇ ತಾತ್ವಿಕ ಅನುಮೋದನೆ ನೀಡಲಾಗಿಲ್ಲ. ೨೦೨೨ ನೇ ಸಾಲಿನಲ್ಲಿ ಹಣ ಗಳಿಕೆಗಾಗಿ ೧೫೭೪ ಕಿಮಿ ಉದ್ದದ ೩೨ ವಿವಿಧ ರಾಷ್ಟ್ರೀಯ ಹೆದ್ದಾರಿ ವಿಸ್ತಾರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುತಿಸಿದೆ ಎಂದು ತಿಳಿಸಿದರು.

ಇದಲ್ಲದೇ ಸುಮಾರು ೯೦೦೦ ಕಿಮಿ ಉದ್ದದ ಆರ್ಥಿಕ ಕಾರಿಡಾರಗಳ ಅಭಿವೃದ್ದಿಗೆ ಸರ್ಕಾರವು ರೂ.೫೩೫೦೦೦ ಕೋಟಿ , ಅಂತರ ಕಾರಿಡಾರ ಮತ್ತು ಫೀಡರ ರಸ್ತೆಗಳಲ್ಲಿ ಸುಮಾರು ೬೦೦೦ ಕಿಮಿ ಉದ್ದದ ಮತ್ತು ರಾಷ್ಟ್ರೀಯ ಕಾರಿಡಾರಗಳಲ್ಲಿ ೫೦೦೦ ಕಿಮಿ ಉದ್ದದ ರಸ್ತೆಗಳ ದಕ್ಷತೆಯ ಸುಧಾರಣೆಗೆ ಯೋಜಿಸಲಾಗಿದೆ. ಸುಮಾರು ೨೦೦೦ ಕಿಮಿ ಉದ್ದದ ಗಡಿ ಮತ್ತು ಅಂತರ ರಾಷ್ಟ್ರೀಯ ಸಂಪರ್ಕ ರಸ್ತೆಗಳು, ಸುಮಾರು ೨೦೦೦ ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳನ್ನು ೮೦೦ ಕಿಮಿ ಎಕ್ಸಪ್ರೆಸ್ ಹೈವೇಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

ಅಣ್ಣಾ ಸಾಹೇಬ ಜೊಲ್ಲೆಯವರ 2 ಪ್ರಶ್ನೆ: ಕೇಂದ್ರ ಸರಕಾರದ ಉತ್ತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button