Latest

ಟೋಕಿಯೋ ಒಲಂಪಿಕ್ಸ್; ಬೆಳ್ಳಿಗೆದ್ದ ಮೀರಾಬಾಯಿ ಚಾನು

ಪ್ರಗತಿವಾಹಿನಿ ಸುದ್ದಿ; ಟೋಕಿಯೋ: ಟೋಕಿಯೋ ಒಲಂಪಿಕ್ಸ್-2020ರಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂದಿದ್ದು, 49 ಕೆಜಿ ವಿಭಾಗದ ಮಹಿಳಾ ವೇಟ್ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಮೊದಲ ಬೆಳ್ಳಿ ಪದಕ ಗೆದ್ದಿದ್ದಾರೆ.

ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಸಮರ್ಥವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ ಜಿ ಭಾರ ಎತ್ತುವ ಮುಲಕ ದಾಖಲೆ ಬರೆದಿದ್ದಾರೆ.

ಮೀರಾಬಾರಿ ಚಾನು ಸಾಧನೆಗೆ ಪ್ರಧಾನಿ ಮೋದಿ ಅಭಿನಂದಿಸಿದ್ದು, ಇದು ಭಾರತದ ಶ್ರೇಷ್ಠ ಸಾಧನೆಯಾಗಿದ್ದು, ಉತ್ತಮ ಆರಂಭ ಎಂದಿದ್ದಾರೆ. ಈ ಹಿಂದೆ ಸಿಡ್ನಿ ಒಲಂಪಿಕ್ ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ 69 ಕೆ ಜಿ ವೇಟ್ಲಿಫಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ರಾಷ್ಟ್ರೀಯ ಹೆದ್ದಾರಿ ಬಂದ್: ಪುಣಾದಿಂದ ಬಂದಿದ್ದ ರೋಗಿ ಹುಬ್ಬಳ್ಳಿಗೆ ಶಿಫ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button