Kannada NewsLatest

9 ಜನರ ಸಾವು; ಮೂವರ ಕಣ್ಮರೆ, 73 ರಾಷ್ಟ್ರೀಯ ಹೆದ್ದಾರಿ ಕುಸಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರುನಾಡು ತತ್ತರಗೊಂಡಿದ್ದು, ಅತಿವೃಷ್ಟಿ, ಪ್ರವಾಹದಿಂದಾಗಿ ಬೆಳಗಾವಿ, ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಳಗಾವಿ ಭೇಟಿಗೂ ಮುನ್ನ ಮಾತನಾಡಿದ ಸಚಿವರು, ಪ್ರವಾಹ ಪರಿಸ್ಥಿತಿ ನಿಭಾಯಿಸಲು 7 ಎನ್.ಡಿ.ಆರ್.ಎಫ್ ತಂಡ ಹಾಗೂ 15 ಎಸ್.ಡಿ.ಆರ್.ಎಫ್ ತಂಡ ನಿಯೋಜಿಸಲಾಗಿದೆ. ಮಳೆಯಿಂದಾಗಿ 73 ರಾಷ್ಟ್ರೀಯ ಹೆದ್ದಾರಿಗಳು ಕುಸಿದಿವೆ. 16 ಸ್ಥಳಗಳಲ್ಲಿ ಭೂ ಕುಸಿತವುಂತವುಂಟಾಗಿದ್ದು, 134 ಮನೆಗಳು ಹಾನಿಯಾಗಿವೆ ಎಂದರು.

ಮಳೆ ಅನಾಹುತಕ್ಕೆ 9 ಜನರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ 153 ಜನರನ್ನು ರಕ್ಷಿಸಲಾಗಿದ್ದು, ಒಟ್ಟು 31,360 ಜನರನ್ನು ಸ್ಥಳಾಂತರಿಸಲಾಗಿದೆ. 24417 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕರಾವಳಿ ಭಾಗದಲ್ಲಿ ಇನ್ನೂ 3 ದಿನ ಮಳೆಯಾಗಲಿದೆ ಎಂದು ವಿವರಿಸಿದರು.

ಹೌದು, ಸಂಜೆ ಬೆಳಗಾವಿಗೆ ಬರೋದ್ರೊಳಗೆ ಹೈಕಮಾಂಡ್ ಸಂದೇಶ ಬರುತ್ತೆ, ನಿಮಗೂ ತಿಳಿಯುತ್ತೆ -ಯಡಿಯೂರಪ್ಪ

Home add -Advt

ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ತಂದು ಚೆಲ್ಲಿದ ಶಾಸಕ ಅಭಯ ಪಾಟೀಲ (ವಿಡೀಯೋ ಸಹಿತ ವರದಿ)

Related Articles

Back to top button