Kannada NewsKarnataka NewsLatest

ಬೊಮ್ಮಾಯಿ ಅಭಿನಂದಿಸಿದ ಡಾ.ಪ್ರಭಾಕರ ಕೊರೆ ಕೇಳಿದ್ದೇನು ಗೊತ್ತೆ ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಬೆಂಗಳೂರಿನಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮಮ್ಾಯಿ ಭೇಟಿ ಮಾಡಿ ಅಭಿನಂದಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭೇಟಿ ಮಾಡಿದ ಕೋರೆ, ಉತ್ತರ ಕರ್ನಾಟಕಕ್ಕಾಗಿ ಹಲವು ಅಹವಾಲು ಮಂಡಿಸಿದರು.

ಬೆಳಗಾವಿಯಲ್ಲಿ ವಿಧಾನಮಂಡಳದ ಮೊದಲ ಅಧಿವೇಶನ ನಡೆಸುವಂತೆ, ವಸುವರ್ಣ ವಿಧಾನಸೌಧದ ಆವರಣದಲ್ಲಿ ಶಾಸಕರ ಭವನ ನಿರ್ಮಾಣ ಮಾಡುವಂತೆ ಕೋರಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ಬೊಮ್ಮಾಯಿ ಬಳಿ ಕೋರಿದ್ದಾಗಿ ಕೋರಿ ಪ್ರಗತಿವಾಹಿನಿಗೆ ತಿಳಿಸಿದರು.

ಒಂದೇ ಬಾರಿ ಎಲ್ಲವನ್ನೂ ಹೇಳಬೇಡಿ, ಹಂತಹಂತವಾಗಿ ಮಾಡೋಣ ಎಂದು ಬೊಮ್ಮಾಯಿ ನಗುತ್ತ ತಿಳಿಸಿದರು ಎಂದು ಕೋರೆ ಹೇಳಿದರು.

ಬಸವರಾಜ ಬೊಮ್ಮಾಯಿ ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸಿದ ಕೋರೆ, ಅವರ ತಂದೆ ಎಸ್.ಆರ್.ಬೊಮ್ಮಾಯಿ ಜೊತೆಗೂ ತಾವು ಕಳೆದ ದಿನಗಳನ್ನು ನೆನಪಿಸಿದರು.

ಆರ್.ಅಶೋಕ, ಮಹಾಂತೇಶ ಕವಟಗಿಮಠ, ವಿಶ್ವನಾಥ ಪಾಟೀಲ, ಸುಬ್ರಹ್ಮಣ್ಯ ನಾಯ್ಡು ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

200 ಕೋಟಿ ರೂ ವೆಚ್ಚದ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಫೆಬ್ರವರಿಯಲ್ಲಿ ಜನಸೇವೆಗೆ ಅರ್ಪಣೆ: ಡಾ. ಪ್ರಭಾಕರ ಕೋರೆ

ಬೊಮ್ಮಾಯಿ ಸರಕಾರ ಸೇರುವುದಿಲ್ಲ ಎಂದ ಜಗದೀಶ್ ಶೆಟ್ಟರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button