ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಮೊದಲ ಘೋಷಣೆ ಇದು. ರಾಜ್ಯದ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವುದಾಗಿ ಪ್ರಕಟಿಸಿದರು.
ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲೆನ್ನುವುದು ಈ ಯೋಜನೆಯ ಉದ್ದೇಶ. ಹಾಗಾಗಿ ವರ್ಷದಲ್ಲಿ ಒಂದು ಬಾರಿ ಸಹಾಯಧನ ಸಿಗಲಿದೆ. ಬೇರೆ ಬೇರೆ ಶಿಕ್ಷಣಕ್ಕೆ ಬೇರೆ ಬೇರೆ ಅನುದಾನ ನಿಗದಿಪಡಿಸಲಾಗಿದೆ.
ಪದವಿ ಶಿಕ್ಷಣಕ್ಕೆ ಬೇರೆ, ಉನ್ನತ ಶಿಕ್ಷಣಕ್ಕೆ ಬೇರೆ ಮೊತ್ತ ಸಿಗಲಿದೆ. ಹಣ್ಣು ಮಕ್ಕಳಿಗೆ ಗಂಡು ಮಕ್ಕಳಿಗಿಂತ ಸ್ವಲ್ಪ ಜಾಸ್ತಿ ದೊರೆಯಲಿದೆ.
2020 -21ನೇ ಸಾಲಿನಿಂದಲೇ ಇದು ಜಾರಿಯಾಗಲಿದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂ ಮೀಸಲಿಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಪಿಯುಸಿ, ಐಟಿಐ, ಡಿಪ್ಲೋಮಾ ಪಡೆಯುವ ಗಂಡು ಮಕ್ಕಳಿಗೆ 2,500 ರೂ. ಹೆಣ್ಣು ಮಕ್ಕಳಿಗೆ 3000 ರೂ.
ಬಿಎ, ಎಸ್ ಸಿ, ಬಿಕಾಂ ಗಂಡು ಮಕ್ಕಳಿ 5000 ರೂ., ಹೆಣ್ಣು ಮಕ್ಕಳಿದೆ 5500 ರೂ.
ಎಲ್ಎಲ್ ಬಿ, ಪ್ಯಾರಾ ಮೆಡಿಕಲ್, ಬಿ ಫಾರ್ಮಾ, ನರ್ಸಿಂಗ್ ಇತ್ಯಾದಿ ಗಂಡು ಮಕ್ಕಳಿಗೆ 7,500 ರೂ, ಹೆಣ್ಣು ಮಕ್ಕಳಿದೆ 8000 ರೂ.
ಎಂಬಿಬಿಎಸ್, ಬಿಇ, ಬಿಟೆಕ್ ಇತ್ಯಾದಿ ಸ್ನಾತಕೋತ್ತರ ಕೋರ್ಸ್ ಗಳಿಗೆ ಗಂಡು ಮಕ್ಕಳಿಗೆ 10 ಸಾವಿ ರೂ., ಹೆಣ್ಣು ಮಕ್ಕಳಿಗೆ 11 ಸಾವಿರ ರೂ.
ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವ, ತನ್ನ ಹೆಸರಲ್ಲಿ ಜಮೀನು ಹೊಂದಿರುವ ರೈತರ ಮಕ್ಕಳಿಗೆ ಈ ಪ್ರಯೋಜನ ಸಿಗಲಿದೆ. ದತ್ತು ಪಡೆದ ಮಕ್ಕಳಿಗೆ ಸಹ ಅನ್ವಯವಾಗಲಿದೆ. ಬೇರೆ ರೀತ್ಯ ಪ್ರೋತ್ಸಾಹದನ ಪಡೆಯುತ್ತಿದ್ದರೂ ಈ ಸಹಾಯಧನ ಸಿಗಲಿದೆ.
ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – 1628344185001_inverted
3 ಕೋಟಿ ವಂಚನೆ; ಮಾಜಿ ಶಾಸಕ ಹಾಗೂ ಪತ್ನಿ ವಿರುದ್ಧ ದೂರು ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ