ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಗೆ ಇಡಿ ದಿಢೀರ್ ಶಾಕ್ ನೀಡಿದ್ದು, 10 ದಿನಗಳೊಳಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ನೋಟೀಸ್ ಜಾರಿ ಮಾಡಿದೆ.
ಆಗಸ್ಟ್ 5ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಗೆ ಸಂಬಂಧಿಸಿದ 15 ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳಲ್ಲಿ ವಸ್ತು, ಆಸ್ತಿಗಳು ಪತ್ತೆಯಾಗಿತ್ತು. ಇವುಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಇನ್ನು ಹತ್ತು ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ ಇಡಿ ಮೊದಲ ನೋಟೀಸ್ ನೀಡಿದೆ.
ವಿಶೇಷವಾಗಿ ಜಮೀರ್ ಕಟ್ಟಿಸಿರುವ ಸುಮಾರು 80 ಕೋಟಿ ರೂ. ಅಂದಾಜು ವೆಚ್ಚದ ಮನೆಯ ಖರ್ಚು ವೆಚ್ಚಗಳ ಕುರಿತು ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ.
ಐ ಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ತನಿಖಎ ಮುಂದುವರಿದಿದ್ದು, ಇನ್ನೂ ಯಾರ್ಯಾರು ಸಿಕ್ಕಿ ಬೀಳಲಿದ್ದಾರೆ ಕಾದು ನೋಡಬೇಕಿದೆ. ಐಎಂಎಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡ ಮುಸ್ಲಿಮರೇ ಹಣ ತೊಡಗಿಸಿದ್ದು, ಅವರಿಗೀಗ ದಿಕ್ಕು ತೋಚದಂತಾಗಿದೆ.
ಜಮೀರ್ ಅಹ್ಮದ್ ಮತ್ತು ರೋಶನ್ ಬೇಗ್ ಇಬ್ಬರ ವ್ಯವಹಾರದ ಕುರಿತು ಸಹ ಇಡಿಯಿಂದ ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ