ರೈಲ್ವೆ ಸಚಿವಾಲಯಕ್ಕೆ ಅರ್ಜಿಯ ಪ್ರತಿ ತಲುಪಿಸಲು ಹೈಕೋರ್ಟ್ ಆದೇಶ

ರೈಲು ಅಪಘಾತಗಳಲ್ಲಿ ವನ್ಯಜೀವಿಗಳ ಸಾವಿನ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದಾಂಡೇಲಿ ಅಭಯಾರಣ್ಯ, ಬೆಳಗಾವಿ, ಹಳಿಯಾಳ ಹಾಗೂ ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ ರೈಲು ಅಪಘಾತಗಳಲ್ಲಿ ವನ್ಯಜೀವಿಗಳ ಸಾವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ರೈಲ್ವೆ ಸಚಿವಾಲಯಕ್ಕೆ ಅರ್ಜಿಯ ಪ್ರತಿಯನ್ನು ತಲುಪಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಆಗಸ್ಟ್ 3 ರಂದು ಆದೇಶಿಸಿದೆ.

 ಅರ್ಜಿಯ ಕುರಿತು ಮಾರ್ಚ್ 30 ರಂದು ಆದೇಶ ನೀಡಿದ್ದ ನ್ಯಾಯಾಲಯವು ಪ್ರತಿವಾದಿಗಳಾದ ರೈಲ್ವೆ ಸಚಿವಾಲಯ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ನಿರ್ದೇಶನ ನೀಡಿತ್ತಲ್ಲದೆ ಆಕ್ಷೇಪಣೆಗಳನ್ನು ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು.

ಕುರಿತು ಜೂನ್ 24 ರಂದು ಮತ್ತೊಮ್ಮೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ಅಂತಿಮ ಒಂದು ತಿಂಗಳ ಸಮಯವನ್ನು ನೀಡಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 3 ಕ್ಕೆ ಮುಂದೂಡಿತ್ತು.

ಆಗಸ್ಟ್ 3 ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮುಖ ಪ್ರತಿವಾದಿಯಾದ ರೈಲ್ವೆ ಸಚಿವಾಲಯವು ಪ್ರತಿನಿಧಿಸದೆ ಇದ್ದುದರಿಂದ ರೈಲ್ವೆ ಸಚಿವಾಲಯಕ್ಕೆ ಮತ್ತೊಮ್ಮೆ ಅರ್ಜಿಯ ಪ್ರತಿಯನ್ನು ಜೂನ್ 24 ಆದೇಶದ ಪ್ರತಿಯ ಜೊತೆಗೆ ತಲುಪಿಸಲು ಅರ್ಜಿದಾರರ ವಕೀಲರಿಗೆ ಆದೇಶ ನೀಡಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 26 ಕ್ಕೆ ಮುಂದೂಡಿದೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ 56,245 ಕೋಟಿ ವೆಚ್ಚದ 36 ರೈಲ್ವೆ ಯೋಜನೆ ಕಾರ್ಯಗತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button