Kannada NewsKarnataka NewsLatest

ಜೊಲ್ಲೆ ನನ್ನ ಸಿಸ್ಟರ್ ಇದ್ದ ಹಾಗೆ, ಅವರ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದ ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಶಿಕಲಾ ಜೊಲ್ಲೆ ನನ್ನ ಸಿಸ್ಟರ್ ಇದ್ದಹಾಗೆ. ಅವರ ಬಗ್ಗೆ ನೂರಕ್ಕೆ ನೂರು ವಿಶ್ವಾಸವಿದೆ. ಯಾರೋ ಹೇಳಿದ ತಕ್ಷಣ ಅದನ್ನೆಲ್ಲ ತನಿಖೆ ಮಾಡುವುದಕ್ಕಾಗುವುದಿಲ್ಲ. ಅವರ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೊಲ್ಲೆಯವರ ಬಗ್ಗೆ ಬಂದಿರುವ ಆರೋಪಗಳಲ್ಲಿ ಹುರುಳಿಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸುಮ್ಮನೇ ಯಾರೋ ಹೇಳುತ್ತಾರೆಂದು ಎಲ್ಲವನ್ನೂ ತನಿಖೆಗೊಳಪಡಿಸಲು ಸಾಧ್ಯವಿಲ್ಲ. ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು.

ಕೂತೂಹಲ ಮೂಡಿಸಿದ ಆನಂದ ಸಿಂಗ್ ಹೆಜ್ಜೆ: ಎಲ್ಲ ಹೇಳಿದ್ದಾರೆ ಎಂದ ಸಿಎಂ

Home add -Advt

ಕಾಂಗ್ರೆಸ್ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಈಶ್ವರಪ್ಪ

Related Articles

Back to top button