Kannada NewsKarnataka News
ಪರಿಹಾರಕ್ಕಾಗಿ ಜೆಸಿಬಿ ಹಚ್ಚಿ ಮನೆ ಕೆಡವಿದ್ದಾರೆ, ಅಂತವರು ಜೈಲಿಗೆ ಹೋಗುತ್ತಾರೆ ಎಂದ ಈಶ್ವರಪ್ಪ
ಅತೀವೃಷ್ಟಿಯಲ್ಲಿ ನಕಲಿ ಅರ್ಜಿದಾರರಿಗೆ ಕಠಿಣ ಶಿಕ್ಷೆ ಕಾದಿದೆ- ಕೆ ಎಸ್ ಈಶ್ವರಪ್ಪ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೆಲವರು ಗ್ರಾಮೀಣ ಪ್ರದೇಶದಲ್ಲಿ ಬೀಳದೇ ಇರುವ ಮನೆಗಳನ್ನು ತಾವೇ ಖುದ್ದಾಗಿ ಯಂತ್ರಗಳ ಮುಖಾಂತರ ಕೆಡಿವಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಪರಿಹಾರಕ್ಕೆ ಅರ್ಜಿ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗೆ ಮಾಡಿದವರ ವಿರುದ್ದ ಕ್ರೀಮಿನಲ್ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಸಿದರು.
ಚಿಕ್ಕೊಡಿ ಭಾಗದ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ , ಮಹಾಂತೇಶ್ ಕವಟಗಿಮಠ ಮತ್ತು ಶಾಸಕರಾದ ಗಣೇಶ್ ಹುಕ್ಕೇರಿ, ಮಾಜಿ ಶಾಸಕ ಸಂಜಯ ಪಾಟೀಲ, ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಉಮಾಮಹದೇವನ್, ಮತ್ತು ಜಿ ಪಂ ಸಿಇಓ , ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ