ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಮುಖ್ಯಸ್ಥರಿಲ್ಲದೇ ತನಿಖೆ ನಡೆದಿರುವುದು ಹೇಗೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ತನಿಖೆಗೆ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿತ್ತು. ಆದರೆ ಮೂರು ತಿಂಗಳಿಂದ ಸೌಮೆಂದು ಮುಖರ್ಜಿ ಸುದೀರ್ಘ ರಜೆಯಲಿದ್ದರು. ಎಸ್ ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆದಿರುವುದು ಹೇಗೆ ಎಂದು ಕೋರ್ಟ್ ಪ್ರಶ್ನಿಸಿದೆ.
ಎಸ್ ಐಟಿಗೆ ಅಧಿಕಾರಿ ನೇಮಕ ಅನುಭವ ಹಾಗೂ ಹಿರಿತನ ಪ್ರಕರಣದ ತನಿಖೆಗೆ ನೆರವಾಗಲಿ ಎಂಬ ಉದ್ದೇಶದಿಂದ ಆದರೆ ಇಲ್ಲಿ ಅಧಿಕಾರಿ ಸುದೀರ್ಘ ರಜೆಯಲ್ಲಿರುವಾಗಲೇ ತನಿಖೆ ಮುಗಿದಿದೆ. ಈ ಬಗ್ಗೆ ಎಸ್ ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿಯವರೇ ಪ್ರತ್ಯೇಕ ಪ್ರಮಾಣಪತ್ರದಲ್ಲಿ ತನಿಖೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಸೂಚಿಸಿದೆ.
ಮಕ್ಕಳಿಗಾಗಿ ಹೆಲ್ತ್ ಕ್ಯಾಂಪ್ ಶೀಘ್ರ ಆರಂಭ; ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ