ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಇಂದು ರಾತ್ರಿ ಗುಡುಗು ಸಿಡಿಲು ಮಿಂಚಿನಿಂದ ಕೂಡಿದ ಜಟಿಜಿಟಿ ಮಳೆಯಾಗಿದೆ.
ರಾತ್ರಿ 8 ಗಂಟೆಗೆ ಹುಕ್ಕೇರಿ ಪಟ್ಟಣದ ಹಾಗೂ ಸಂಕೇಶ್ವರದಲ್ಲಿ ಸಿಡಿಲು ಗುಡುಗಿನಿಂದ ಮಳೆಯಾಗಿದ್ದು ಸೋಮವಾರ ಸಂತೆ ದಿನವಾಗಿದ್ದರಿಂದ ವ್ಯಾಪಾರಸ್ಥರ ತರಕಾರಿ ಧಾನ್ಯ ಕಾಳು ಸೇರಿದಂತೆ ಇನ್ನಿತರ ಸಾಮಗ್ರಿಗಳು ಮಳೆನೀರಿನ ತೋಯ್ದು ಹಾಳಾಗಿದೆ.
ಸಂಕೇಶ್ವರ ಪೋಲಿಸ್ ಠಾಣೆಯ ಸಮೀಪವಿರುವ ಮನೆಯ ಮುಂದೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಉರಿದುಹೋಗಿದೆ.
ಎಂ.ಕೆ.ಹುಬ್ಬಳ್ಳಿಯಲ್ಲೂ ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದುಹೋಗಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಅಬ್ಬರದ ಮಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ