ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಿದ್ದ ಮಹಾನ್ ನಾಯಕರ ಪುತ್ಥಳಿ ತೆರವಿಗೆ ಮುಂದಾಗುವ ಮೂಲಕ ಬಿಬಿಎಂಪಿ ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಂಡಿದೆ.
ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಪುತ್ಥಳಿಗಳ ಬಗ್ಗೆ ಸರ್ವೆ ಮಾಡಿದ್ದ ಬಿಬಿಎಂಪಿಯಿಂದ ಬಸವಣ್ಣ, ಡಾ.ರಾಜ್ ಕುಮಾರ್, ವಿಷ್ಣು ವರ್ಧನ್, ಶಂಕರ್ ನಾಗ್ ಸೇರಿದಂತೆ 500ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ ಪತ್ತೆಯಾಗಿದೆ. ಪಾಲಿಕೆ ಅನುಮತಿ ಇಲ್ಲದೇ ರಾಜಧಾನಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ನಿರ್ಮಿಸಲಾಗಿರುವ ಪುತ್ಥಳಿ ತೆರವಿಗೆ ಬಿಬಿಎಂಪಿ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಜನಪ್ರಿಯ ನಾಯಕರ ಪುತ್ಥಳಿಗಳನ್ನೇ ತೆರವುಗೊಳಿಸಲು ತೀರ್ಮಾನಿಸುವ ಮೂಲಕ ಬಿಬಿಎಂಪಿ ವಿವಾದತ್ಮಕ ನಿರ್ಧಾರಕ್ಕೆ ಕೈಹಾಕಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಮಿಡ್ ನೈಟ್ ಪಾರ್ಟಿ, ಭೀಕರ ಅಪಘಾತ; ಜಿಗ್ ಜ್ಯಾಗ್ ರೈಡ್ ಮಾಡಿ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ