ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಯಾದ ಕೆ.ಎಚ್.ಪಿ.ಟಿ.ಯ ಸಹಭಾಗಿತ್ವದಲ್ಲಿ ಕೋವಿಡ್-೧೯ ವಿಶೇಷ ಕಿಟ್ ಬಿಡುಗೊಳಿಸಲಾಗಿದೆ.
ಕೋವಿಡ್-೧೯ ರೋಗಿಗಳು ಮುಂದೆ ಹೊಸದಾಗಿ ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದೊತ್ತಡಡದಂತಹ ಖಾಯಿಲೆಗಳಿಗೆ ಈಡಾಗುವ ಸಂಭವ ಹೆಚ್ಚಿರುವುದು ಕಂಡುಬಂದಿರುತ್ತದೆ. ಕೋವಿಡ್-೧೯ ನೊಂದಿಗೆ ಇತರೆ ಖಾಯಿಲೆಗಳನ್ನು ಹೊಂದಿರುವ ರೋಗಿಗಳು ಗಂಭೀರ ಪರಿಸ್ಥಿತಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಅವರಿಗೆ ನಿಯತವಾಗಿ ದೇಹದ ಉಷ್ಣತೆ ಮತ್ತು ಆಮ್ಲಜನಕ ಪ್ರಮಾಣದೊಂದಿಗೆ ಕ್ತದೊತ್ತಡ, ರಕ್ತದಲ್ಲಿನ ಗ್ಲುಕೋಸ್ (ಸಕ್ಕರೆಯ ಅಂಶ), ಹಿಮೋಗ್ಲೋಬಿನ್(ಕಬ್ಬಿಣದಅಂಶ), ದೇಹಸೂಚ್ಯಂಕ, ಇತ್ಯಾದಿ ಪರೀಕ್ಷೆಗಳ ಅಗತ್ಯವೂ ಬೀಳಬಹುದು.
ಹಾಗಾಗಿ ಅವರಿಗೆ ಮನೆಯ ಪ್ರತ್ಯೇಕವಾಸದ ಅವಧಿಯಲ್ಲಷ್ಟೇ ಅಲ್ಲದೆ ಕೋವಿಡ್ ಗುಣವಾದ ನಂತರವೂ ಕೂಡಾ ಮೇಲ್ವಿಚಾರಣೆ ಬೇಕಾಗುತ್ತದೆ.
ಕರ್ಣಾಟಕ ಸರ್ಕಾರವು ರಚಿಸಿರುವ ಪಂಚಾvಯಿತಿ ಕಾರ್ಯಪಡೆಗಳು ಗ್ರಾಮಪಂಚಾಯಿತಿ ಸದಸ್ಯರು, ಸ್ಥಳೀಯ ಮಧ್ಯಮ ಮಟ್ಟದ ಆರೋಗ್ಯ ಕಾರ್ಯಕರ್ತರು/ಸೇವಾದಾರರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಸ್ವ-ಸಹಾಯ ಸಂಘಗಳು ಮತ್ತು ಯುವಜನತೆಯ ಪಾಲ್ಗೊಳ್ಳುವಿಕೆಯಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡದ ರೋಗಿಗಳನ್ನು ನಿಗಾವಣೆ ಮಾಡಲು ಸಾಧ್ಯವಾಗುವಂತೆ ಮತ್ತು ಈ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪಂಚಾಯ್ತಿ ಕಾರ್ಯಪಡೆಗಳಿಗೆ ಕೋವಿಡ್ -೧೯ ನಿರ್ವಹಣಾ ಕಿಟ್ಟನ್ನು ನೀಡಲಾಗಿದೆ.
ಕಿಟ್‌ಗಳ ವೈಶಿಷ್ಟತೆಗಳು :
ರಕ್ತದಲ್ಲಿ ಹಿಮೋಗ್ಲೋಬಿನ್ ಸಾಗಿಸುವ ಆಮ್ಲಜನಕದ ಮಟ್ಟ ಪರೀಕ್ಷಿಸಲು(SpO2) ಪಲ್ಸ್‌ಆಕ್ಸಿಮೀಟರ್, ದೇಹದ ಉಷ್ಣತೆ ಪರೀಕ್ಷಿಸಲು ಇನ್ಫ್ರಾರೆಡ್ಥರ್ಮಾ ಮೀಟರ್, ರಕ್ತದೊತ್ತಡ ಪರೀಕ್ಷಿಸಲು (ಅಧಿಕರಕ್ತದೊತ್ತಡ) ಡಿಜಿಟಲ್ ಉಪಕರಣ ಇರಲಿದೆ.
ರಕ್ತದಲ್ಲಿನ ಗ್ಲುಕೋಸ್ಪ ಪರೀಕ್ಷಿಸಲು (ಡಯಾಬಿಟಿಸ್ಮೆಲಿಟಸ್) ಗ್ಲುಕೋಮೀಟರ್ ಹಾಗೂ ೧೦೦ ಗ್ಲುಕೋಮೀಟರ್ಪಟ್ಟಿಗಳು, ಹಿಮೋಗ್ಲೋಬಿನ್ (ಕಬ್ಬಿಣದಅಂಶ) (ಅನೀಮಿಯಾ/ರಕ್ತಹೀನತೆ) ಪರೀಕ್ಷಿಸಲು ಹಿಮೋಗ್ಲೋಬಿನೋ ಮೀಟರ್ ಹಾಗೂ ೨೫ ಹಿಮೋಗ್ಲೋಬಿನೋಮೀಟರ್ಪಟ್ಟಿಗಳು ಇವೆ.
ಮಗುವಿನ ಮೇಲ್ತೋಳಿನ ಮಧ್ಯಭಾಗದ ಪರಿಧಿಯನ್ನು (MUAC) ಅಳೆಯುವ ಪಟ್ಟಿ, ತೂಕವನ್ನು ಪರೀಕ್ಷಿಸಲು ಡಿಜಿಟಲ್ ತೂಕದಯಂತ್ರ, ಅಳತೆಪಟ್ಟಿ , BMI ಚಾರ್ಟುಗಳು ಮತ್ತು ಆಪ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್ ಇರುವುದು ಈ ಕಿಟ್‌ನ ವಿಶೇಷತೆಯಾಗಿದೆ.
ಮಹಿಳಾ ಪೊಲೀಸ್ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಕೊಂದು ಹೂತ; ಸತ್ತು ಹೋಗಿದ್ದ ವ್ಯಕ್ತಿ ಎದ್ದುಬಂದಿದ್ದು ಹೇಗೆ..?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ