Kannada NewsKarnataka NewsLatest

​7.55 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಕ್ಷೇತ್ರದ 3 ಗ್ರಾಮಗಳಲ್ಲಿ ​ಜಲಜೀವನ್ ಮಿಶನ್ ಯೋಜನೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳ್ಳಿ, ಮಾರಿಹಾಳ ಮತ್ತು ಬಾಳೆಕುಂದ್ರಿ ಕೆಎಚ್ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಸಂಸದೆ ಮಂಗಲಾ ಅಂಗಡಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿದರು.
ಶಿಂದೊಳ್ಳಿಯಲ್ಲಿ ಸುಮಾರು 3.40 ಕೋಟಿ ರೂ,ಗಳ ವೆಚ್ಚದಲ್ಲಿ, ಮಾರಿಹಾಳದಲ್ಲಿ 2.20 ಕೋಟಿ ರೂ. ವೆಚ್ಚದಲ್ಲಿ ಹಾಗೂ ಬಾಳೆಕುಂದ್ರಿಯಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಲಾಗುತ್ತಿದೆ.
  ಈ ಕಾಮಗಾರಿಗಳ ಮೂಲಕ ಮನೆ ಮನೆಗೆ ಪೈಪಲೈನ್ ಅಳವಡಿಕೆಯಾಗಲಿದ್ದು, ಓವರ್ ಹೆಡ್ ಟ್ಯಾಂಕ್ ಗಳು ಸಹ ನಿರ್ಮಾಣವಾಗಲಿವೆ. ಪ್ರತಿ ಮನೆಗೆ ಪೈಪ್ ಲೈನ್ ನೀರು ಸರಬರಾಜು ಮಾಡಲಾಗುವುದು.
ಶಿಂದೊಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ​ಎಪಿಎಂಸಿ ಅಧ್ಯಕ್ಷ ಯುವರಾಜ​ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷ​ ಮಿಲನ್ ಮಲ್ಲಾರಿ, ಉಪಾಧ್ಯಕ್ಷ​ ಗಂಗವ್ವ ಪೂಜೇರಿ, ಸದಸ್ಯರುಗ​ಳಾದ​ ಬಾಬಾಗೌಡ ಪಾಟೀಲ, ಪಿರಾಜಿ ಅನಗೊಳ್ಕರ್, ಶೀಲಾ ತಿಪ್ಪಣ್ಣಗೋಳ, ವೀರಭದ್ರಯ್ಯ ಪೂಜಾರ, ಸಾಗರ ಮುಚ್ಚಂಡಿ, ರೇಖಾ ಶಹಪೂರಕರ್, ನಾಗೇಂದ್ರ ಕುರುಬರ, ನಂದಿನಿ ಕುರುಬರ, ಸವಿತಾ ಮುಚ್ಚಂಡಿ, ಸತೀಶ್ ಶಹಪೂರಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾರಿಹಾಳ​ದಲ್ಲಿ ನಡೆದ ಕಾರ್ಯಕ್ರಮದಲ್ಲಿ​ ಗ್ರಾಮ ಪಂಚಾಯತ್ ಸದಸ್ಯರು​,​ ಕಾಂಗ್ರೆಸ್ ಮುಖಂಡರಾದ ಮಾಜಿ ತಾ ಪಂ ಅಧ್ಯಕ್ಷ ಶಂಕರ​ಗೌಡ ಪಾಟೀಲ್​,​ ಯುವರಾಜ ಕದಮ​,​ ಬಸವರಾಜ ಮ್ಯಾಗೋಟಿ​,​ ನಾ​ಗೇ​ಶ್ ದೇಸಾಯಿ​,​ ಶ​ಮೀರ್​ ಮುಲ್ಲಾ​,​ ಪ್ರಕಾಶ್ ತಮ್ಮಣ್ಣ​,​ ಮಾಲ್ಲಾರಿ​, ಇನ್ನು ಅನೇಕ ಹಿರಿಯರು ಹಾಗೂ ಮುಖಂಡರು​,​ ಕಾರ್ಯಕರ್ತರು ಉಪಸ್ಥಿತರಿದ್ದರು​.​
​ 
ಬಾಳೇಕುಂದ್ರಿ ​ಕೆಎಚ್​ ಗ್ರಾಮ​ದ ಕಾಮಗಾರಿ ಸಂದರ್ಭದಲ್ಲಿ ಯುವರಾಜ ಕದಮ್​,​ ನಾಗೇಶ್ ದೇಸಾಯಿ​,​ ಮಾಜಿ ತಾ ಪಂ ಸದಸ್ಯ​,​ನಿಲೇಶ್ ಚಂದಡಕರ​,​ ಸರ್ವ ಗ್ರಾಮ ಪಂ ಸದಸ್ಯರು ಹಾಗೂ ಊರಿನ ಹಿರಿಯರು ಮತ್ತು ಮುಖಂಡರು​,​ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button