ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಜಿಲ್ಲೆಯ 372 ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ ಎಂದು ಸರಕಾರ ತಿಳಿಸಿದೆ.
ವಿಧಾನಪರಿಷತ್ತಿನಲ್ಲಿ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರ ನೀಡಿದ್ದಾರೆ.
ಖಾನಾಪುರ ತಾಲೂಕಿನ 106, ಬೆಳಗಾವಿ ತಾಲೂಕಿನ 2, ಹುಕ್ಕೇರಿಯ ತಾಲೂಕಿನ 53, ಬೈಲಹೊಂಗಲ ತಾಲೂಕಿನ 42, ರಾಮದುರ್ಗ ತಾಲೂಕಿನ 29, ಕಿತ್ತೂರಿನ 22, ಗೋಕಾಕದ 62, ಸವದತ್ತಿಯ 2, ಮೂಡಲಗಿಯ 16, ಚಿಕ್ಕೋಡಿಯ 12, ನಿಪ್ಪಾಣಿ 3, ಅಥಣಿ 5 ಹಾಗೂ ರಾಯಬಾಗ ತಾಲೂಕಿನ 18 ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಜಿಲ್ಲೆಯಲ್ಲಿ ಒಟ್ಟೂ 816 ಸ್ಮಶಾನಗಳಿವೆ.
ಸ್ಮಶಾನಕ್ಕೆ ಸರಕಾರ ಜಾಗ ಲಭ್ಯವಿಲ್ಲದ ಪ್ರದೇಶದಲ್ಲಿ ಖಾಸಗಿಯವರಿಂದ ಜಮೀನು ಖರೀದಿಗೆ 26 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಇನ್ನಷ್ಟು ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – Barial Ground LA Question
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ