Kannada NewsLatest

ಶೆಂಡೂರ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿಪ್ಪಾಣಿ ಮತ ಕ್ಷೇತ್ರದ 9 ಕಾಂಗ್ರೆಸ್ ಮುಖಂಡರು ಇಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಶೆಂಡೂರ ಗ್ರಾಮದ ತಾನಾಜಿ ಶಿಂಧೆ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಾಜಿ ಬೊಂಗಳೆ, ಪಾಂಡುರಂಗ ಕಾಂಬಳೆ, ಚಂದ್ರಕಾಂತ ಮುಸಳೆ, ಅರವಿಂದ ಸೂರ್ಯವಂಶಿ, ಮಂದಾರ ಖರಡೆ, ಸುನೀಲ ನರಕೆ, ಭೈರು ಕಾಂಬಳೆ, ಬಾಬುರಾವ ತೊಡಕರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

Home add -Advt

ಈ ವೇಳೆ ಮಾತನಾಡಿದ ಅಣ್ಣಾಸಾಹೇಬ ಜೊಲ್ಲೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಜನರ ಮನೆ-ಮನ ಮುಟ್ಟುತ್ತಿವೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಪ್ರತಿಯೊಬ್ಬ ಕಾರ್ಯಕರ್ತನನ್ನು ಗೌರವದಿಂದ ಕಾಣುವ ಪಕ್ಷ ನಮ್ಮದು. ಹೀಗಾಗಿ ಜನರ ಹಿತಕ್ಕಾಗಿ ಶ್ರಮಿಸುತ್ತಿರುವ ಬಿಜೆಪಿಗೆ ಇತರೆ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ಎಮ್.ಪಿ. ಪಾಟೀಲ ಜಿ.ಪಂ. ಸದಸ್ಯರಾದ ಸಿದ್ಧು ನರಾಟೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸದಸ್ಯರಾದ ಪ್ರಕಾಶ ಶಿಂಧೆ, ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಪವನ ಪಾಟೀಲ, ಧಾವಣೆ ಸರ್, ಬಂದುಕ (ಮಲಗೊಂಡಾ) ಪಾಟೀಲ, ಆತ್ಮಾರಾಮ ಚೌಗುಲೆ, ಪ್ರವೀಣ ಗಿರಿ, ಸಂತೋಷ ನಾಯಿಕ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ದೇವಸ್ಥಾನಗಳು ಓಪನ್: ಷರತ್ತು ಅನ್ವಯ

Related Articles

Back to top button