
ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಿಳಾ ಕಾನ್ಸ್ ಟೇಬಲ್ ಗಳಿಗೆ ಸಿಹಿಸುದ್ದಿ ನೀಡಿರುವ ಮಹಾರಾಷ್ಟ್ರ ಸರ್ಕಾರ ಕೆಲಸದ ಅವಧಿಯನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಪಾಂಡೆ, ಮಹಿಳಾ ಪೊಲೀಸ್ ಪೇದೆಗಳ ಕೆಲಸದ ಸಮಯದಲ್ಲಿ ಕಡಿತಗೊಳಿಸಲಾಗಿದ್ದು, 12 ಗಂಟೆಯಿಂದ 8 ಗಂಟೆಗೆ ಇಳಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಈ ನಿಯಮ ಆರಂಭಿಕ ಹಂತದಲ್ಲಿ ನಾಗ್ಪುರ, ಅಮರಾವತಿ ನಗರ, ಪುಣೆ ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಕುತೂಹಲ ಮೂಡಿಸಿದ ಜಾರಕಿಹೊಳಿ ಸಹೋದರರ ನಡೆ