ಪ್ರಗತಿವಾಹಿನಿ ಸುದ್ದಿ; ರಾಮನಗರ: ರಾಜಕಾರಣಕ್ಕೆ ಬರುವ ಮೊದಲು ನಮಗೆ ಬೇಕಾಗಿರೋದು ಮಾನವೀಯತೆ. ಬಡವರು, ದುರ್ಬಲರು ಬಂದಾಗ ತಾಯಿ ಹೃದಯ ಇಟ್ಟುಕೊಂಡು ಅವರ ಸೇವೆ ಮಾಡಬೇಕು ಎಂದು ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರಾಮನಗರದ ಕೇತಗಾನಹಳ್ಲಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾದಿದ ಅವರು, ಯುವಕರು ಕುಮಾರಣ್ಣನನ್ನು ನೋಡಿ ಈ ಮಾನವೀಯತೆ ಪಾಠ ಕಲಿಯ ಬೇಕು. ಕುಮಾರಸ್ವಾಮಿ ಅವರಂತಹ ತಂದೆಗೆ ಮಗನಾಗಿ ಹುಟ್ಟಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಯುವಕರಿಗೆ ನಮ್ಮ ದೇವರು, ದೊಡ್ಡ ಸಾಹೇಬ್ರು ಸ್ಪೂರ್ತಿ. ಈ ವಯಸ್ಸಿನಲ್ಲೂ ಪಕ್ಷ ಕಟ್ಟುತ್ತೇವೆ ಎಂದು ಹೋರಾಟ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಮ್ಮ ದೇವರು ಎಂದು ಹೇಳಿದರು.
ಕಳೆದ 15 ವರ್ಷದಿಂದ ಕುಮಾರಣ್ಣ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ಒಂದು ಬಾರಿ ಕುಮಾರಣ್ಣನ ಸ್ವಾತಂತ್ರ್ಯ ಸರ್ಕಾರ ತರುವ ದೃಢ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಹಾಸನ ಸಂಸದರು, ನನ್ನ ತಮ್ಮ ಲೋಕಸಭೆಯಲ್ಲಿ ಅತ್ಯಂತ ಪ್ರಬುದ್ಧತೆಯಿಂದ ನಡೆದುಕೊಳ್ಳುತ್ತಿದ್ದಾರೆ, ಅವರ ಬಗ್ಗೆ ನನಗೆ ಅತ್ಯಂತ ಹೆಮ್ಮೆಯಿದೆ. ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಗೆ ಆಗಲ್ವಾ ಅವರೇಕೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲ್ಲ ಅನ್ನೊ ಗೊಂದಲಗಳನ್ನ ಇವತ್ತು ನನ್ನ ತಮ್ಮ ಹೋಗಲಾಡಿಸಿದ್ದಾರೆ. ಈ ಪಕ್ಷದಲ್ಲಿ ನಾನು ಪ್ರಜ್ವಲ್ ರೇವಣ್ಣ ಇಬ್ರು ಮಾತ್ರ ಯುವಕರಿಲ್ಲ. ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು, ಎಲ್ಲಾರು ಸೇರಿ ಪಕ್ಷ ಕಟ್ಟೋಣ ಎಂದು ಹೇಳಿದರು.
ಶಾಸಕರು, ಸಂಸದರಿಂದ ಸಿಎಂ ಬೊಮ್ಮಾಯಿ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ