Kannada NewsKarnataka News
ಸಿಎಂ ಪರಿಹಾರ ನಿಧಿಯಿಂದ 7.15 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 14 ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟೂ 7.15 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ.
ವಿವಿಧ ಕಾಯಿಲೆಗಳಿಂದ ಬಳಲಿ ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದೆ ನೆರವು ಕೋರಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸಂಪರ್ಕಿಸಿದ್ದರು. ಸಾಧ್ಯವಾದಷ್ಟು ಸ್ವಂತ ಹಣವನ್ನೂ ನೀಡಿದ ಹೆಬ್ಬಾಳಕರ್, 14 ಜನರಿಗೆ ಆಸ್ಪತ್ರೆ ವೆಚ್ಚಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿದ್ದರು. ಜೊತೆಗೆ ಸತತ ಫಾಲೋ ಅಪ್ ಮೂಲಕ ಮಂಜೂರು ಮಾಡಿಸಿ, ಭಾನುವಾರ ಈ ಕುರಿತ ಮಾಹಿತಿ ಪತ್ರವನ್ನು ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳು, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ ಮೊದಲಾದವರು ಇದ್ದರು.
ಫಲಾನುಭವಿಗಳ ಮಾಹಿತಿ -
1. ಶಾಂತಾ ಶಂಕರ ದೊನ್ಯಾನ್ನವರ ಸಾ|| ವಾಘವಾಡೆ.
2. ಲಕ್ಷ್ಮೀ ಅಡಿವೆಪ್ಪ ರಾಗಿಪಾಟೀಲ ಸಾ|| ತಾರಿಹಾಳ.
3. ಪ್ರೀತಿ ಪ್ರಕಾಶ ಕಡ್ಯಾಗೋಳ ಸಾ|| ಹೊನ್ನಿಹಾಳ.
4. ಪಿರಾಜಿ ಬಾಬು ಪಾಟೀಲ ಸಾ|| ಖನಗಾಂವ ಕೆ ಎಚ್.
5. ಮಾರುತಿ ಮಾಂಡಾಲಿಕ್ ಸಾ|| ಅಂಬೇವಾಡಿ.
6. ಮಂಜುಳಾ ಸಂಜೀಮನಿ ಸಾ|| ಸಂತಿ ಬಸ್ತವಾಡ.
7. ಕಮಲಾ ಬಸವಂತ ಹಿರೇಕರ್ ಸಾ|| ಬಿಜಗರಣಿ.
8. ಪುಂಡಲೀಕ ನಾರಾಯಣ ಜಾಧವ್ ಸಾ|| ಬಿಜಗರಣಿ.
9. ಶಾಂತವ್ವ ಕಂಬಿ ಸಾ|| ಕೆಕೆ ಕೊಪ್ಪ.
10. ಶೇವಂತ ಕುಂಡೆಕರ್ ಸಾ|| ರಾಜಹಂಸಗಡ್.
11. ಸಮ್ರೀನ್ ದೇವಲಾಪುರ ಸಾ|| ಹಿರೇ ಬಾಗೇವಾಡಿ.
12. ಮಾಲಾ ಚಂದನಹೊಸೂರ ಸಾ|| ಹಲಗಾ.
13. ವಿಠ್ಠಲ ಬಂಡಿಗಣಿ ಸಾ|| ಸುಳೇಭಾವಿ.
14. ವೈಜಯಂತ ಮೋರೆ ಸಾ|| ಬಿಜಗರಣಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ