ಪ್ರಗತಿವಾಹಿನಿ ಸುದ್ದಿ, ಸಾಂಬ್ರಾ (ಬೆಳಗಾವಿ) – ಇನ್ನು 15 ದಿನದಲ್ಲಿ ಸಾಂಬ್ರಾ ಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಘೋಷಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀ ದುರ್ಗಾದೇವಿ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಜ್ಞ ವೈದ್ಯರನ್ನು ಕರೆಸಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುವುದು. ಶಿಬಿರಕ್ಕೆ ಎಲ್ಲ ರೋಗಗಳ ತಜ್ಞ ವೈದ್ಯರನ್ನೂ ಕರೆಸುತ್ತೇನೆ. ಶಿಬಿರದ ಸಂಪೂರ್ಣ ವೆಚ್ಚವನ್ನು ನಾನೇ ನೋಡಿಕೊಳ್ಳುತ್ತೇನೆ. ಜನರು ಯಾರೂ ತಪ್ಪಿಸದೆ ಆಗಮಿಸಿ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಕರೆನೀಡಿದರು.
ನಾನು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಕುರಿತು ಮುಂಚಿತವಾಗಿ ಯೋಚಿಸಿರಲಿಲ್ಲ. ಇಲ್ಲಿನ ದೇವಿಯೇ ನನ್ನಿಂದ ಈ ಮಾತನ್ನು ಹೇಳಿಸಿದ್ದಾಳೆ. ಜನರ ಆರೋಗ್ಯ ನನಗೆ ಬಹಳ ಮುಖ್ಯ ಹಾಗಾಗಿ ನೀವು ಒಂದು ದಿನ ಕೂಲಿಗೆ ಹೊಗುವುದನ್ನು ಬಿಟ್ಟರೂ ತೊಂದರೆಯಿಲ್ಲ. ಆದರೆ ಆರೋಗ್ಯ ತಪಾಣೆ ಮಾಡಿಸಿಕೊಳ್ಳುವುದನ್ನು ಮಾತ್ರ ಬಿಡಬೇಡಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಶ ದೇಸಾಯಿ, ಗ್ರಾಮ ಪಂಚಾಯತಿಯ ಸದಸ್ಯರು, ಸದು ಪಾಟೀಲ, ಶಾಂತಾ ದೇಸಾಯಿ, ಸುಲೋಚನ ಜೋಗಾಣಿ, ಶ್ವೇತಾ ಬಾಮನವಾಡಿ, ಸಂತೋಷ ದೇಸಾಯಿ, ಮಹೇಶ ಕುಲಕರ್ಣಿ, ಲಕ್ಷ್ಮಣ ಕೊಳೆಪ್ಪಗೋಳ, ಗುರುನಾಥ ಅಷ್ಟೇಕರ್, ಪ್ರವೀಣ ಜಮಖಂಡಿ, ಕೇದಾರ್ ಧರ್ಮೋಜಿ, ಧನಶ್ರೀ ಚೌಗುಲೆ, ಬಾವುಕಣ್ಣ ಬಸರೀಕಟ್ಟಿ, ಉಲ್ಲಾಸ ಬಾಮನವಾಡಿ, ದೇವಸ್ಥಾನ ಕಮೀಟಿಯವರು ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನಕ್ಕೆ ತೆರಳಿ, ದೇವಿಯ ದರ್ಶನ, ಆಶೀರ್ವಾದ ಪಡೆದು, ಮುಂಬರುವ ದಿನಗಳಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿಕೊಡುವುದಾಗಿ ದೇವಸ್ಥಾನ ಕಮೀಟಿಯವರಿಗೆ ಭರವಸೆ ನೀಡಿದ್ದೇನೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗೇಶ ದೇಸಾಯಿ, ದೇವಸ್ಥಾನ ಕಮೀಟಿಯವರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ