ಹೊರ ರಾಜ್ಯದವರ ಪ್ರವೇಶಕ್ಕೆ ಶೀಘ್ರವೇ ಮುಕ್ತ ಪ್ರವೇಶ

ಪ್ರಗತಿವಾಹಿನಿ ಸುದ್ದಿ, ಕಾರವಾರ –  ಗೋವಾ ಪ್ರವಾಸೋದ್ಯಮ ನವೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಪ್ರಸ್ತುತ ಕೊವಿಡ್ ಎರಡೂ ಡೋಸ್ ಲಸಿಕೆ ಪಡೆದ ಅನ್ಯ ರಾಜ್ಯದವರಿಗೆ ಮಾತ್ರ ಗೋವಾ ಪ್ರವೇಶಕ್ಕೆ ಅವಕಾಶವಿದ್ದು ಸಧ್ಯದಲ್ಲೇ ಈ ನಿಯಮ ಸಡಿಲಿಕೆ ಮಾಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು.

ನವರಾತ್ರಿ ಹಿನ್ನೆಲೆಯಲ್ಲಿ ತಾಲೂಕಿನ ಸದಾಶಿವಗಡದ ಐತಿಹಾಸಿಕ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದ ಪ್ರವಾಸಿಗರಿಗೆ ಗೋವಾ ಪ್ರವೇಶಕ್ಕೆ ಸಧ್ಯದಲ್ಲೇ ಮುಕ್ತ ಅವಕಾಶ ನೀಡಲಾಗುವುದು ಎಂದರು.

ಗೋವಾ ರಾಜ್ಯದಲ್ಲಿ ಮೊದಲ ಡೋಸ್ ಕೊವಿಡ್ ಲಸಿಕೆ ಪೂರ್ಣಗೊಂಡಿದೆ. ಎಡನೇ ಡೋಸ್ ಲಸಿಕೆಯನ್ನು ಇನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸುತ್ತೇವೆ ಎಂದರು. ಶಿವಾಜಿ ಮಹಾರಾಜರ ಕಾಲದ ಐತಿಹಾಸಿಕ ದೇವಸ್ಥಾನವಾದ ಕಾರವಾರದ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವ ಇಚ್ಛೆ ಬಹಳ ದಿನಗಳಿಂದ ಇತ್ತು, ಅದೀಗ ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದಲ್ಲಿ ನಾರ್ಕೋಟಿಕ್ ಜಿಹಾದ್ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button