Latest

ಬಂಗಾರ ಕೊಳ್ಳುವ ಪ್ಲಾನ್ ಇದೆಯೇ? ಹಾಗಾದರೆ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನ, ಬೆಳ್ಳಿಯ ದೈನಂದಿನ ವಹಿವಾಟಿನಲ್ಲಿ ದರ ಬದಲಾವಣೆ ಸರ್ವೇ ಸಾಮಾನ್ಯ. ಆದರೆ ಆಭರಣ ಪ್ರಿಯರಿಗೆ ಬಂಗಾರ ಕೊಳ್ಳುವ ಯೋಚನೆಯಿದ್ದರೆ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ.

ಹಾಗಾದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಇಂದು ಸ್ಥಿರತೆ ಕಂಡುಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,300 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,43,000 ರೂ ನಿಗದಿಯಾಗಿದೆ. 24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 48,330 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,83,300 ರೂ ಆಗಿದೆ.

ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 64,200 ರೂಪಾಯಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,650 ರೂಪಾಯಿ ಹಾಗೂ ಹಾಗೂ 100 ಗ್ರಾಂ ಚಿನ್ನಕ್ಕೆ 4,46,500 ರೂಪಾಯಿ ಇದೆ. ಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡಿದೆ. 24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 48,710 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,87,100 ರೂ ಆಗಿದೆ.

ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,43,000 ರೂಪಾಯಿ ಇದೆ. ಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡಿದೆ. 24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 48,330 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,83,300 ರೂ ಆಗಿದೆ.

ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು ಕೆಜಿ ಬೆಳ್ಳಿಗೆ 67,800 ರೂಪಾಯಿ ನಿಗದಿಯಾಗಿದೆ.
ಭದ್ರವಾಗಿ ಇಟ್ಟಿದ್ದ 65,000 ರೂ.ಹಳೆ ನೋಟು ಪತ್ತೆ; ಬದಲಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ ಭಿಕ್ಷುಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button