ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಫೇಸ್ ಬುಕ್ ಒಡೆತನದ ವಾಟ್ಸಪ್ ಸೇವೆ ನವೆಂಬರ್ 1ರ ಬಳಿಕ ಸ್ಥಗಿತಗೊಳ್ಳಲಿದೆ ಎಂದು ವಾಟ್ಸಪ್ ಸಂಸ್ಥೆ ಮಾಹಿತಿ ನೀಡಿದೆ.
2011ಕ್ಕೂ ಮೊದಲು ಖರೀದಿಸಿದ ಆಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ ಗಳಲ್ಲಿ ನವೆಂಬರ್ 1ರಿಂದ ವಾಟ್ಸಪ್ ಕಾರ್ಯನಿರ್ವಹಿಸುವುದಿಲ್ಲ. ಮುಖ್ಯವಾಗಿ ಆಂಡ್ರಾಯ್ಡ್ 4.0.4 ಅಥವಾ ಅದಕ್ಕಿಂತ ಹಿಂದೆ ಇನ್ ಸ್ಟಾಲ್ ಮಾಡಿದ OS ಹೊಂದಿರುವ ಸ್ಮಾರ್ಟ್ ಫೋನ್ ಗಳು ಹಾಗೂ iOS9 ಅಥವಾ ಅದಕ್ಕಿಂತ ಮುಂಚೆ ಇನ್ ಸ್ಟಾಲ್ ಮಾಡಿರುವ ಐಫೋನ್ ಗಳಲ್ಲಿ ವಾಟ್ಸಪ್ ಬಂದ್ ಆಗಲಿದೆ.
ಸ್ಯಾಮ್ ಸಂಗ್, ಎಲ್ ಜಿ, ಝೆಡ್ ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ಹಳೆ ಮಾದರಿಯ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ ಎಂದು ಪಟ್ಟಿ ಬಿಡುಗಡೆ ಮಾಡಿದೆ.
ಆಪಲ್ ಮೊದಲ ತಲೆಮಾರಿನ ಎಸ್ ಇ, 6ಎಸ್ , 6 ಎಸ್ ಪ್ಲಸ್, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಎಸ್ 2, ಗ್ಯಾಲಕ್ಸಿ ಎಸ್ 3 ಮಿನಿ, ಗ್ಯಾಲಕ್ಸಿ ಕೋರ್, ಎಲ್ ಜಿ ಲೂಸಿಡ್ 2 ಸೇರಿದಂತೆ ಹಲವು ಮೊಬೈಲ್ ಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ