Latest

ಕೇಂದ್ರ, ರಾಜ್ಯ ಸರಕಾರದಿಂದ ದೀಪಾವಳಿ ಉಡುಗೊರೆ: ಪೆಟ್ರೋಲ್, ಡಿಸೆಲ್ ದರದಲ್ಲಿ ಇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೇಂದ್ರ ಮತ್ತು ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಯಲ್ಲಿ ಕಡಿತ ಮಾಡಿದೆ.

ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು 5 ರೂ ಹಾಗೂ ಡಿಸೆಲ್ ಬೆಲೆಯನ್ನು 10 ರೂ. ಕಡಿತಗೊಳಿಸಿದ್ದರೆ, ರಾಜ್ಯ ಸರಕಾರ ಎರಡರ ಬೆಲೆಯನ್ನೂ ತಲಾ 7 ರೂ. ಇಳಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ 2100 ಕೋಟಿ ರೂ. ಹೊರೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಟ್ವೀಟ್ ಮಾಡಿದ್ದು, ಇದು ಜನತೆಗೆ ದೀಪಾವಳಿ ಉಡುಗೊರೆ ಎಂದಿದ್ದಾರೆ.

ಈ ನಿರ್ಧಾರದಿಂದ ಪೆಟ್ರೋಲ್ ಬೆಲೆ 95.50 ಹಾಗೂ ಡಿಸೆಲ್ ಬೆಲೆ 85.50 ರೂ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನ ದಿನಾಂಕ ನ.8ರಂದು ತೀರ್ಮಾನ -ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button