8.58 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದು ವಾರಸುದಾರರಿಗೆ ಮರಳಿಸಿದ ಬೆಳಗಾವಿ ಜಿಲ್ಲಾ ಪೊಲೀಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2020 -21ನೇ ಸಾಲಿನಲ್ಲಿ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿರುವ 8.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಬೆಳಗಾವಿ ಜಿಲ್ಲಾ ಪೊಲೀಸರು ಸೋಮವಾರ ವಾರಸುದಾರರಿಗೆ ಮರಳಿಸಿದರು.
1.32 ಕೋಟಿ ರೂ. ಬಂಗಾರ 1.20 ಕೋಟಿ ರೂ. ನಗದು ಸೇರಿದಂತೆ ಆಭರಣ, ವಾಹನ, ಮೊಬೈಲ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟೂ 206 ಪ್ರಕರಣಗಳು ಈ ಸಂದರ್ಭದಲ್ಲಿ ದಾಖಲಾಗಿದ್ದವು.
ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಜಿಲ್ಲೆಯ ಸಾವಿರಾರು ಪೊಲೀಸ್ ಸಿಬ್ಬಂದಿ ಪ್ರಕರಣಗಳನ್ನು ಬೇಧಿಸಲು ಶ್ರಮಿಸಿದ್ದರು.
ಪತ್ತೆ ಹಚ್ಚಲಾದ ಮಹತ್ವದ ಪ್ರಕರಣಗಳು
1. ಕಾಗವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2020 ಕಲಂ:98 ಕೆಪಿ ಆಕ್ಷ ನೇದ್ದರಲ್ಲಿ ದಿನಾಂಕ:16.06.2020 ರಂದು ಶೇಡಬಾಳ ಗ್ರಾಮದ ಹತ್ತಿರ ಸಂಶಯುಕ್ತ 5 ಜನ ಆರೋಪಿತರಾದ 1 ಅಭಯಸಿಂಹ ಗಾಯಕವಾಡ ಸಾ; ಉಪ್ಪರಿ ಜಿಲ್ಲಾ: ಕೊಲ್ಲಾಪೂರ ಹಾಲಿ:ಬೆಳಗಾವಿ ನಗರ 2. ಆಶಿತೋಶ ಖಿಲಾರಿ ಸಾ: ಸನಡಿ ತಾ: ಮಾನ್ ಜಿಲ್ಲಾ ಸಾತಾರ ಹಾಲಿ: ಬೆಳಗಾವಿ ನಗರ 3. ಅಕ್ಷಯ ಬಾಳಾಸಾಬ್ ದೇಸಾಯಿ ಸಾ:ಅರ್ಜುನಿ ತಾ:ಕಾಗಲ್ ಹಾಲಿ: ಬೆಳಗಾವಿ ನಗರ ರವರನ್ನು ದಸ್ತಗೀರ ಮಾಡಿ ಅವರ ವಶದಲ್ಲಿಂದ 01,08,54,150/- ರೂ ವಶಪಡಿಸಿಕೊಂಡಿದ್ದು ಅದೆ.
2. ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:78/2020 ನೇದ್ದರ ದರೋಡೆ ಪ್ರಕರಣದಲ್ಲಿ ದಿನಾಂಕ:12.06.2020 ರಂದು 09 ಜನರಾದ ಆರೋಪಿತರಾದ 1. ಗುರುನಾಥ ಹಾಳ ಸಾ:ಇಟ್ನಾಳ 2. ಕಲೀಂ ಮಾಲದಾರ ಸಾ: ಚಿಂಚಲಿ 3, ದಾದಾಸಾಬ್, ಶಂಕರ ಟೋನಿ ಸಾಸಂಬರಗಿ 4. ಜನಾರ್ಧನ ಗೇತ್ ಸಾಪಿಂಪಿಲವಾಡಿ ರಾಜ್ಯ: ಮಹಾರಾಷ್ಟ್ರ 5, ದಿನೇಶ ಕೊಳ್ಳಿ ಸಾ:ಸಂಬರಗಿ ತಾ:ಅಥಣಿ 6, ಶಿವಾನಂದ ಪನದಿ ಸಾ:ಮುಗಳಖೋಡ 7. ಪಾಂಡುರಂಗ ಮಾಲದಿನ್ನಿ ಸಾ: ಘಟಪ್ರಭಾ ತಾ:ಗೋಕಾಕ 8. ಸಚಿನ್ ಚೌಗಲಾ ಸಾ:ನಾಗನೂರ ಪಿ ಎ, ತಾ: ಅಥಣಿ 9. ಯಲ್ಲಾಲಿಂಗ ಹಾಳ್ಳಳ್ಳಿ ಸಾ: ಇಟ್ನಾಳ ತಾ: ರಾಯಬಾಗ ರವರನ್ನು ದಸ್ತಗೀರ ಮಾಡಿ ದರೋಡೆ ಮಾಡಿದ್ದ 01 ಲಾರಿ ಆಕಿ 20,00,000/ ರೂಪಾಯಿ ಹಾಗೂ 13,00,000/- ರೂಪಾಯಿ ಕಿಮ್ಮತ್ತಿನ ಅರಿಶಿನವನ್ನು ವಶಪಡಿಸಿಕೊಂಡಿರುತ್ತಾರೆ.
3. ಅಥಣಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:325/2020 ನೇದ್ದರಲ್ಲಿ ಲಾಭಕ್ಕಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ದಿನಾಂಕ:12.10.2020 ರಂದು ಕೂಗನೊಳ್ಳಿ ಗ್ರಾಮದಲ್ಲಿ ಆರೋಪಿತನಾದ 1. ನವನಾಥ ಬಾಪಸಾಬ್ ಬಾಬರ್ ಸಾ: ಜಂಬಗಿ ತಾ: ಆಥಣಿ 2. ಗುರುಸಿದ್ದ ರಾಮಚಂದ್ರ ಕೊಳ್ಳಕರ್ ಸಾ:ಜಂಬಗಿ ತಾ: ಅಥಣಿ ಇವರನ್ನು ಬಂಧಿಸಿ 01 ಕೆ.ಜಿ 491 ಗ್ರಾಂ ಬಂಗಾರ ಅಕಿ: 75,00,000/- ರೂ. ವಶಪಡಿಸಿಕೊಂಡಿದ್ದು ಅದೆ.
4. ಕುಡಚಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:105/2021 ನೇದ್ದರ ಕಳ್ಳತನ ಮಾಡಿದ ಪ್ರಕರಣದಲ್ಲಿ ದಿನಾಂಕ:20.08.2021 ರಂದು ಸುತ್ತಟ್ಟಿ ಕ್ರಾಸ್ ಹತ್ತಿರ 4 ಜನ ಆರೋಪಿತರಾದ ಬಸವರಾಜ ಸನದಿ ಸಾ: ಕೊಳ್ಳಿಗುಡ್ಡ 2. ದಯಾನಂದ ಸನದಿ ಸಾಕೊಳ್ಳಿಗುಡ್ಡ 3. ಸಿದ್ರಾಮ್ ಪಟಾಯತ್ ಸಾ:ಯಪಾರಟ್ಟಿ 4. ಚಿದಾನಂದ ಲಾಲಿ ಸಾ:ಕೊಳ್ಳಿಗುಡ್ಡ ರವರನ್ನು ಬಂಧಿಸಿ ಕಳ್ಳತನ ಮಾಡಿದ್ದ 03 ಟ್ರಾಕ್ಟರ ಇಂಜಿನ್, 8 ಟ್ರೇಲರ್ ಹಾಗೂ 01 ರೂಟರ್ ವಶಪಡಿಸಿಕೊಂಡು ಅಕಿ: 34,50,000/- ರೂ ವಶಪಡಿಸಿಕೊಂಡಿರುತ್ತದೆ.
5. ಗೋಕಾಕ ಶಹರ ಠಾಣೆ ಗುನ್ನಾ ನಂ:87/2021 ನೇದ್ದರ ಕಳ್ಳತನ ಪ್ರರಕಣದಲ್ಲಿ ದಿನಾಂಕ:18.08.2021 ರಂದು ಕಡಬಗಟ್ಟಿ ರಸ್ತೆಯಲ್ಲಿ 4 ಜನರಾದ 1. ಉಮೇಶ ಈರಪ್ಪ ಸತ್ತಿ ಸಾ:ಹಿಡಕಲ್ ತಾ:ಹುಕ್ಕೇರಿ 2. ಶಿವಪ್ಪ ಕಲ್ಲಪ್ಪ ಚಂಗನಾಳೆ ಸಾ: ಬೆಲ್ಲದ ಬಾಗೇವಾಡಿ 3. ವಿನೋದ ಬಾಳಪ್ಪ ಪಾಟೀಲ ಸಾ: ಬೆಲ್ಲದ ಬಾಗೇವಾಡಿ 4. ಸದ್ದಾಂ ಹುಸೇನ್ ಅಪ್ಪಾಸಾಬ ನೆರ್ಲಿ ಸಾ: ಬೆಲ್ಲದ ಬಾಗೇವಾಡಿ ರವರನ್ನು ಬಂಧಿಸಿ ಕಳ್ಳತನ ಮಾಡಿದ 45 ಗ್ರಾಂ ಬಂಗಾರ ಅಕಿ: 2,02,000/- ರೂ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕಳ್ಳತನ ಮಾಡಿದ 25 ಮೋಟಾರ ಸೈಕಲ್ ಅಕಿ: 8,25,000/- ರೂ ವಶಪಡಿಸಿಕೊಂಡಿದ್ದು ಇರುತ್ತದೆ.
6. ಅಂಕಲಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 66/2021 ನೇದ್ದರ ಮೋಟಾರ ಸೈಕಲ್ ಕಳ್ಳತನ ಪ್ರಕರಣದಲ್ಲಿ ಅಂಕಲಿ ಗ್ರಾಮದ ಅಂಬೇಡ್ಕರ ನಗರದ ಹತ್ತಿರ ರಾಜು ಬಾಳಪ್ಪ ಬಡ್ಡಿ ಹಾಲಿ:ಹಾರೂಗೇರಿ ಇತನನ್ನು ಬಂಧಿಸಿ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕಳ್ಳತನ ಮಾಡಿದ 23 ಮೋಟಾರ ಸೈಕಲ್ ಆಗಿರುತ್ತದೆ. ಮೊಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡು ಅಕಿ:7,31,000/- ರೂ
7. ಮುರಗೋಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 234/2021 ನೇದ್ದರ ಕಳವು ಪ್ರಕರಣದಲ್ಲಿ ದಿನಾಂಕ:14.10.2021 ರಂದು ಯರಗಟ್ಟಿ ಗ್ರಾಮದಲ್ಲಿ ಪ್ರಶಾಂತ ಶಂಕರಶಾ ಕಟವಟೆ ಸಾಟಿಪ್ಪು ನಗರ ಹುಬ್ಬಳ್ಳಿ ದಸ್ತಗೀರ ಮಾಡಿ ಕಳತನ ಮಾಡಿದ್ದ ರೂ 5,80,000 ವಶಪಡಿಸಿಕೊಂಡಿರುತ್ತಾರೆ.
8. ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 216/2021 ನೇದ್ದರ ಕಳ್ಳತನ ಮಾಡಿದ ಪ್ರಕರಣದಲ್ಲಿ ದಿನಾಂಕ:16.10.2021 ರಂದು ಬೆಳಗಾವಿ ನಗರದ ಖಡೇಬಜಾರದಲ್ಲಿ 03 ಜನ ಆರೋಪಿತರಾದ 1 ಅಶ್ವಿನ್ ಜೈನ್ ಸಾ:ಬೆಳಗಾವಿ ನಗರ 2. ಅಭಿದ ತಂದೆ ಜುಮೇಖಾನ್ ಸಾ: ಕೊಲ್ಲಾಪೂರ 3. ರಿಜವಾನ್ ನೂರುವುದ್ದೀನ್ ಬಿಸಂಬರಾ ಸಾಮಣೆ ರವರನ್ನು ಬಂಧಿಸಿ ಕಳತನ ಮಾಡಿದ್ದ 30,73,291/- ರೂ ಕಿಮ್ಮತ್ತಿನ 1308 ಟಾಯರ್ಗಳನ್ನು ವಶಪಡಿಸಿಕೊಂಡಿರುತ್ತಾರೆ.
9. ಘಟಪ್ರಭಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:172/2021 ನೇದ್ದರ ಕಳ್ಳತನ ಪ್ರಕರಣದಲ್ಲಿ ದಿನಾಂಕ:28.10.2021 ರಂದು ಮೃತುಂಜಯ ಸರ್ಕಲ್ ಘಟಪ್ರಭಾದಲ್ಲಿ ಮಾಹಾನಿಂಗ ನಾಗಪ್ಪ ಕುರಿ ಸಾ: ಕಲ್ಲೋಳ್ಳಿ ಆರೋಪಿಯನ್ನು ಬಂಧಿಸಿ ಕಳತನ ಮಾಡಿದ್ದ 14 ಮೋಟಾರ ಸೈಕಲ್ ವಶಪಡಿಸಿಕೊಂಡು ಅಕಿ: 4,00,000 ರೂ ಆಗಿರುತ್ತದೆ.
10] ಘಟಪ್ರಭಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:211/2021 ನೇದ್ದರ ಕಳ್ಳತನ ಪ್ರಕರಣದಲ್ಲಿ ODO:9.10.2021 ರಂದು ಪಾಮಲದಿನ್ನಿ ಗ್ರಾಮದಲ್ಲಿ 1 ಸುರೇಶ, ಬಸಪ್ಪ ಗಾಡಿವಡ್ಡರ ಸಾ: ಪಾಮಲದಿನ್ನಿ ಹಾಗೂ 2, ಅವದಿಕರ್ ಪರಶುರಾಮ್ ಗಾಡಿವಡ್ಡರ ಸಾ: ಪಾಮಲದಿನ್ನಿ ಇಬ್ಬರನ್ನು ದಸ್ತಗೀರ ಮಾಡಿ ಕಳತನ ಮಾಡಿದ್ದ 11 ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದು ಅಕಿ; 3,50,000 ರೂ ಆಗಿರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಸನ್ 2020 ಹಾಗೂ 2021 ರ ಇಲ್ಲಿಯವರೆಗೆ ಒಟ್ಟು 206 ಪ್ರಕರಣಗಳಲ್ಲಿ 8,58,23,999/- do ಸಂಬಂಧಪಟ್ಟ ಬೆಲೆ ಬಾಳುವ ವಸ್ತುಗಳನ್ನು ಯಶಸ್ವಿಯಾಗಿ ಪತ್ತೆ ಮಾಡಿ ವಶಪಡಿಸಿಕೊಂಡು ನ್ಯಾಯಾಲಯಗಳ ಅನುಮತಿ ಪಡೆದು 05:08.11.2021 ರಂದು ಪಿರ್ಯಾದುದಾರರಿಗೆ/ ನೊಂದವರಿಗೆ ಹಿಂದಿರುಗಿಸಲಾಗುವುದು. ಉಳಿದ ಪಿರ್ಯಾದುದಾರರಿಗೆ/ ನೊಂದವರಿಗೆ ಸಂಬಂಧಪಟ್ಟ ಠಾಣಾಧಿಕಾರಿಯವರು ಹಿಂದಿರುಗಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು ಬೆಳಗಾವಿ ರವರು ಪ್ರಕರಣಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರಿಗೆ ಶ್ಲಾಘಿಸಿ, ಪ್ರಶಂಸೆಯನ್ನು ವ್ಯಕ್ತ ಪಡಿಸಿರುತ್ತಾರೆ.
ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – Property return parade
ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತನ್ನಿ; ಹೈಕೋರ್ಟ್ ಖಡಕ್ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ