Latest

ಸಿಎಂ ಸೆಟ್ಲಮೆಂಟ್ ಗೆ ಕರೆದಂತಿತ್ತು: ಪ್ರಿಯಾಂಕ್ ಖರ್ಗೆ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಟ್ ಕಾಯಿನ್ ಹಗರಣ ತನಿಖೆಗೆ ನೀಡಿದರೆ ಸಿಎಂ ಬಸವರಾಜ್ ಬೊಮ್ಮಾಯಿ ತಲೆದಂಡವಾಗಲಿದೆ ಎಂಬ ನನ್ನ ಹೇಳಿಕೆಗೆ ಹಲವರು ವ್ಯಂಗ್ಯವಾಡಿದ್ದರು. ಆದರೆ ಸಿಎಂ ಆಡುವ ಮಾತುಗಳು ನನ್ನನ್ನು ಸೆಟ್ಲಮೆಂಟ್ ಗೆ ಕರೆದಂತಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ನಾವೂ ಇದ್ದೀವಿ, ನೀವೂ ಇದ್ದೀರಿ ಸೆಟ್ಲಮೆಂಟ್ ಮಾಡಿಕೊಳ್ಳೋಣ ಎನ್ನುವ ರೀತಿ ಇತ್ತು ಸಿಎಂ ಬೊಮ್ಮಾಯಿ ಮಾತುಗಳು. ಕಾರಣ ಬಿಟ್ ಕಾಯಿನ್ ವಿಚಾರ ಮಹತ್ವದ ವಿಚಾರವಲ್ಲ ಎಂದು ಹೇಳಿದ್ರು. ಮಹತ್ವದ ವಿಚಾರ ಅಲ್ಲ ಎಂದ ಮೇಲೆ ಸಿಎಂ ಯಾಕೆ ಪ್ರಧಾನಿ ಬಳಿ ಪ್ರಸ್ತಾಪ ಮಾಡಿದರು? ಎಂದು ಪ್ರಶ್ನಿಸಿದ್ದಾರೆ.

2020ರ ನವೆಂಬರ್ ನಲ್ಲಿ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ್ ಇಬ್ಬರೂ ಸಿಸಿಬಿಗೆ ಶರಣಾಗಿದ್ದರು. ಆದರೆ ಮೂರು ದಿನ ಯಾವುದೇ ಮಾಹಿತಿ ದಾಖಲಿಸಲಿಲ್ಲ. ಮೂರು ದಿನದ ಬಳಿಕ ಪೊಲೀಸ್ ಕಸ್ಟಡಿಗೆ ಕಳುಹಿಸಿದರು. ಶ್ರೀಕಿ ಎಂಬ ವ್ಯಕ್ತಿ ಬಿಟ್ ಕಾಯಿನ್ ಮೂಲಕ ಹೈಡ್ರೋ ಗಾಂಜಾ ತಯಾರಿಸುವ ಬಗ್ಗೆಯೂ ಆರೋಪ ಕೇಳಿಬಂದಿತ್ತು ಎಂದಿದ್ದಾರೆ.

ಇನ್ನು ಶ್ರೀಕಿಗೆ ಕಸ್ಟಡಿಯಲ್ಲಿದ್ದಾಗಲೇ ಅಧಿಕಾರಿಗಳೇ ಡ್ರಗ್ಸ್ ಕೊಡುತ್ತಾರೆ ಎಂದು ಶ್ರೀಕಿ ತಂದೆ ಆರೋಪಿಸಿದ್ದರು. ಆಪ್ರಜೋಲಾಮ್ ಎಂಬ ಡ್ರಗ್ಸ್ ಕೊಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ಶ್ರೀಕಿ ವೈದ್ಯಕೀಯ ಚಿಕಿತ್ಸೆಗೊಳಪಡಿಸಲು ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ಅಧಿಕಾರಿಗಳು ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಸ್ಟಮಕ್ ವಾಶ್ ಮಾಡಿಸಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಸರ್ಕಾರದ ಮಟ್ಟದಲ್ಲೇ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಬಿಟ್ ಕಾಯಿನ್ ಕೇಸ್; ಇಬ್ಬರ ಹೆಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ -ಬಿಜೆಪಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button