ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ: ಭಾರತ ಮೂಲದ ಅಮೆರಿಕಾ ಉದ್ಯಮಿ ಪವ್ಲಾಕ್ ಕಂಪನಿ ಸಂಸ್ಥಾಪಕ ಮನೀಶ್ ಸೇಥಿ, ತಾವು ಪ್ರತಿಭಾರಿ ಫೇಸ್ ಬುಕ್ ನೋಡಿದಾಗಲೂ ತಮ್ಮ ಕೆನ್ನೆಗೆ ಬಾರಿಸಲೆಂದು ಮಹಿಳಾ ಉದ್ಯೋಗಿಯೊಬ್ಬರನ್ನು ನೇಮಿಸಿಕೊಂಡಿದ್ದಾರಂತೆ.
ಈ ಕುರಿತು ಸ್ವತ: ಮನೀಶ್ ಸೇಥಿ, ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಮನೀಶ್ ಸೇಥಿ ಅವರ ಪ್ಲವಾಕ್ ಕಂಪನಿ ಸುಲಭವಾಗಿ ಧಾರಣೆ ಮಾಡಬಹುದಾದ ಸಾಧನಗಳನ್ನು ತಯಾರಿಸುತ್ತದೆ.
ತಮ್ಮ ಕೆಲಸದ ಸಂದರ್ಭದಲ್ಲಿ ಫೇಸ್ ಬುಕ್ ಲಾಗಿನ್ ಆದಲ್ಲಿ ಕಪಾಳಕ್ಕೆ ಬಾರಿಸಿ ಎಚ್ಚರಿಸಲು ಉದ್ಯೋಗಿಯೊಬ್ಬರ ಹುಡುಕಾಟಕ್ಕಾಗಿ 2012ರಲ್ಲಿ ಕ್ರೈಸ್ಟ್ ಲೀಗ್ ಕಂಪನಿಗೆ ಭೇಟಿ ನೀಡಿದ್ದರು. ಭೇಟಿ ಬಳಿಕ ಯುವತಿಯೊಬ್ಬರನ್ನು ಈ ಕೆಲಸಕ್ಕೆ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಗಂಟೆಗೆ 8 ಡಾಲರ್ ಅಂದರೆ 594 ರೂಪಾಯಿಯಂತೆ ಕ್ಲಾರಾ ಎಂಬ ಮಹಿಳೆಯನ್ನು ನೇಮಕ ಮಾಡಿದ್ದಾರಂತೆ.
ಮನೀಷ್ ಸೇಥಿ ಅವರ ಕೆನ್ನೆಗೆ ಮಹಿಳೆಯೊಬ್ಬರು ಬಾರಿಸುವ ಫೋಟೋ ಕೂಡ ಭಾರಿ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ