Latest

ಮಹಿಳೆಯರ ಮಾರಾಟ ಪ್ರಕರಣ; ಆರೋಪಿಯನ್ನು ಬಂಧಿಸಿದ ತಾಲಿಬಾನ್ ಪಡೆ

ಪ್ರಗತಿವಾಹಿನಿ ಸುದ್ದಿ; ಕಾಬುಲ್: ಮಹಿಳೆಯರನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಪಡೆಗಳು ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಉತ್ತರ ಅಫ್ಘಾನಿಸ್ತಾನದಲ್ಲಿ ನಡೆದಿದೆ.

130 ಮಹಿಳೆಯರನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಾಜ್ ಜಾನ್ ಪ್ರಾಂತ್ಯದಲ್ಲಿ ದಮುಲ್ಲಾ ಸೆರಾಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಸರ್ದಾರ್ ಮುಬಾರಿಜ್ ತಿಳಿಸಿದ್ದಾರೆ.

Home add -Advt

ಬಡ ಮಹಿಳೆಯರೇ ಬಂಧಿತನ ಟಾರ್ಗೆಟ್ ಆಗಿದ್ದು, ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸರ್ದಾರ್ ಮುಬಾರಿಜ್ ಹೇಳಿದ್ದಾರೆ.

Related Articles

Back to top button