Kannada NewsKarnataka News

ಬೆಳಗಾವಿಯಲ್ಲಿ ಹೆರಾಯಿನ್ ವಶ: ಇಬ್ಬರ ಬಂಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇನ್ನೊವಾ ಕಾರಿನಲ್ಲಿ ಅಕ್ರಮವಾಗಿ 16 ಗ್ರಾಂ ನಿಷೇಧಿತ  ಹೆರಾಯಿನ್ (Heroine) ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಅಬಕಾರಿ ದಳ ದಾಳಿ ಮಾಡಿ ಇಬ್ಬರನ್ನು ಬಂಧಿಸಿದೆ.

ಅಬಕಾರಿ ಅಪರ ಆಯುಕ್ತರು (ಅಪರಾಧ) ಹಾಗು ಅಬಕಾರಿ ಅಧಿಕ್ಷರು, ಜಂಟಿ ಆಯುಕ್ತರ ಕಛೇರಿ, ಅಬಕಾರಿ ಉಪ ಅಧಿಕ್ಷಕರು, ಬೆಳಗಾವಿ ಉಪ ವಿಭಾಗ ಅವರ ಮಾಗ೯ದಶ೯ನದಲ್ಲಿ,  ಜಂಟಿ ಕಾರ್ಯಚರಣೆ ವೇಳೆಯಲ್ಲಿ  ಬೆಳಗಾವಿ ಜಂಟಿ ಆಯುಕ್ತರ ಕಛೇರಿಯ ವಿಚಕ್ಷಣ ದಳದ  ನಿರೀಕ್ಷಕರು  ಹಾಗು ಸಿಬ್ಬಂದಿ,  ಬೆಳಗಾವಿ ವಲಯ ವಲಯ – 1   ರ ವ್ಯಾಪ್ತಿಯಲ್ಲಿಯ ವ೦ಟಮುರಿ ಕಾಲೊನಿ ವ೦ಟಮುರಿ ತಿರುವು  ಬಳಿ ಈ ದಾಳಿ ನಡೆಯಿತು.

ಹೆರಾಯಿನ್ ಹಾಗು ವಾಹನವನ್ನು ವಶಪಡಿಸಿಕೊಂಡು  ಅಬ್ದುಲ್ ಖಾಧಿರ್ ಆತೀಕ್  ನಾಯಕ ಅಲಿಯಾಸ (ಜಿಯಾ) ಮತ್ತು ಆಕೀಬ್ ಸಲೀಮ್ ಮಕಾಂದಾರ್ ಎಂಬ ಇಬ್ಬರು ಆರೊಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಅಬಕಾರಿ ನಿರೀಕ್ಷಕ ದುಂಡಪ್ಪಾ ಹಕ್ಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ದಾಳಿಯಲ್ಲಿ  ಶಿವಲಿಂಗಪ್ಪ ಬನಹಟ್ಟಿ ಅಬಕಾರಿ ಅಧೀಕ್ಷಕರು, ಆನಂದ ಅಡಗಲ, ದುಂಡಪ್ಪ ಹಕ್ಕಿ ಅಬಕಾರಿ ನಿರೀಕ್ಷರು ಅಬಕಾರಿ ಜಂಟಿ ಆಯುಕ್ತರ ಕಚೇರಿ ಬೆಳಗಾವಿ, ವಿಭಾಗ ಬೆಳಗಾವಿ,  ಸಿ   ಎಸ್‌  ಪಾಟೀಲ ಅಬಕಾರಿ ಉಪ ಅಧೀಕ್ಷಕರು ಹಾಗೂ ಮಂಜುನಾಥ ಗಲಗಲಿ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಅಧೀಕ್ಷಕರ ಕಚೇರಿ ಬೆಳಗಾವಿ ಉಪ ವಿಭಾಗ ಬೆಳಗಾವಿ, ಲಿಂಗರಾಜ ಕೆ ಅಬಕಾರಿ ನಿರೀಕ್ಷಕರು ವಲಯ 1, ಅಬಕಾರಿ ಪೇದೆಗಳಾದ ಚಿದಾನಂದ ಬಗರಿ, ವಿಠ್ಠಲ ಗುಡಸಿ, ಮಲ್ಲಪ್ಪ ಟಕ್ಕನ್ನವರ, ಕಿರಣ ಟಕ್ಕನವರ, ಮಹಾದೇವ ಕಟಕನವರ, ಪ್ರವೀಣ ಬಳಕುಡ, ಎಮ್ ಕಟಗಿ, ವಾಹನ ಚಾಲಕರಾದ ಬಾಳಾಪ್ರವೆಶ, ಜಿಲಾನಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button