Kannada NewsLatest

ಕೆಲವರು ತಾತ್ಕಾಲಿಕ ಆಯ್ಕೆಗೆ ಬರುತ್ತಾರೆ; ಎದುರಾಳಿಗಳ ವಿರುದ್ಧ ಸತೀಶ ಜಾರಕಿಹೊಳಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಕಳೆದ ಬಾರಿ ಗೆಲ್ಲಲ್ಲಿಕ್ಕೆ ಬೇಕಾದ ಮತಗಳಿದ್ರು ಕೂಡಾ ಸೋತಿದ್ದೇವೆ. ಹೀಗಾಗಿ ಆಗಾದ ಅನುಭವ ಈ ಚುನಾವಣೆಯಲ್ಲಿ ಆಗದಿರಿಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದರು.

ಖಾನಾಪುರ ಮತಕ್ಷೇತ್ರದ ಬೀಡಿ ಗ್ರಾಮದಲ್ಲಿ ಗುರುವಾರ ನಡೆದ ವಿವಿಧ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸೋಲು ಅನುಭವಿಸಿದ್ದೇವೆ. ಆ ಅನುಭವ ಈ ಚುನಾವಣೆಯಲ್ಲಿ ಆಗದಿರಲಿ ಎಂಬ ಉದ್ದೇಶದಿಂದ ಎಲ್ಲ ಕಡೆಗಳಲ್ಲಿ ತೆರಳಿ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಯಾರೋ ರಾತ್ರೋರಾತ್ರಿ ಬಂದು ಆಮಿಷ ನೀಡುತ್ತಾರೆ. ಆದರೆ ಅದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಿದ್ದೇ ಆದ್ರೆ, ಕ್ಷೇತ್ರದ ಜನರು ವಿಶ್ವಾಸ ಇಟ್ಟಿದ್ದಾರೆಂದು ಶಾಸಕರು ಉತ್ಸಾಹದಿಂದ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಕೆಲವರು ಬರುತ್ತಾರೆ, ತಾತ್ಕಾಲಿಕವಾಗಿ ಆಯ್ಕೆ ಆಗಲಿಕ್ಕೆ. ಕಳೆದ ಬಾರಿ ಹಿಂದೆ ಮುಂದೆ ಯೋಚಿಸದೆ ಜಿಲ್ಲೆಯ ಜನ ವಿವೇಕರಾವ್ ಪಾಟೀಲ ಅವರನ್ನು ಬೆಂಬಲಿಸಿದ ಪರಿಣಾಮ ನೀವು ಅವರನ್ನು ನೋಡಲು ಕೂಡಾ ಆಗಿಲ್ಲ. ಯಾವುದೇ ಪಂಚಾಯ್ತಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ್ದನ್ನು ನೋಡಿಲ್ಲ ಎಂದು ಲೇವಡಿ ಮಾಡಿದರು.

ಕ್ಷೇತ್ರದಲ್ಲಿ ರಸ್ತೆ, ಅಂಗನವಾಡಿ, ಶಾಲಾ ಕಟ್ಟಡ ನಿರ್ಮಾಣ, ಕೆರೆ ತುಂಬಿಸುವ ಕಾರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸವನ್ನು ಸ್ಥಳೀಯ ಶಾಸಕರು ಮಾಡಿದ್ದಾರೆ. ವಿಧಾನಸೌಧದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಿದವರು, ನಿಮ್ಮ ಸಮಸ್ಯೆಗೆ ಸ್ಪಂಧಿಸಿದವರನ್ನು ಆಯ್ಕೆ ಮಾಡಬೇಕು ವಿನಹ, ಹಣ ಕೊಟ್ಟು ಮರಳು ಮಾಡುವವರನ್ನ ಅಲ್ಲ ಎಂದು ಎದುರಾಳಿಗಳನ್ನು ತಿವಿದರು.

ಈಗಾಗಲೇ ಖಾನಾಪುರ ಮತಕ್ಷೇತ್ರದಲ್ಲಿ ಎರಡು ಸುತ್ತಿನ ಪ್ರಚಾರ ನಡೆಸಿದ್ದೇವೆ. ಮತ್ತೊಮ್ಮೆ ಕ್ಷೇತ್ರದ ಶಾಸಕರು ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಲಿದ್ದಾರೆ. ಈ ಚುನಾವಣೆ ಫಲಿತಾಂಶದಿಂದ ಎಂಎಲ್ ಎ ಚುನಾವಣೆಯೂ ಕೂಡ ಸುಲಭವಾಗಬೇಕು ಎಂದು ಕರೆ ನೀಡಿದರು.

ಶಾಸಕಿ ಅಂಜಲಿ ನಿಂಬಾಳ್ಕರ್, ಮಹಾದೇವ ಕೋಳೆ, ಅಡಿವೇಶ ಇಟಗಿ, ಕಲ್ಲಪ್ಪ ಸೇರಿದಂತೆ ಬೀಡಿ ಗ್ರಾಮ ಪಂಚಾಯ್ತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.
ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೇಂದ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button