Kannada NewsLatest

ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಿಪ್ಪಾಣಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಪರವಾಗಿ ಸಚಿವೆ ಶಶಿಕಲಾ ಜೊಲ್ಲೆ ಮತಯಾಚನೆ ಮಾಡಿದರು.

ನಿಪ್ಪಾಣಿ ಮತಕ್ಷೇತ್ರದ ಭಿವಶಿ, ಹಂಚಿನಾಳ, ಆಡಿ, ಅಪ್ಪಾಚಿವಾಡಿ ಕುರ್ಲಿ, ಗ್ರಾಮದಲ್ಲಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಭೆ ನಡೆಸಿ ಕರಪತ್ರ ವಿತರಿಸಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಜನರ ಮನೆ-ಮನ ತಲುಪುತ್ತಿವೆ. ಹೀಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಜನರು ನಮಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

Home add -Advt

ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಗ್ರಾಮ – ಗ್ರಾಮಗಳಿಗೆ ತಲುಪಿಸಲು ಉತ್ತಮ ನಾಯಕನ ಆಯ್ಕೆ ಅತ್ಯಗತ್ಯ. ಹೀಗಾಗಿ ಸದಾ ಜನರ ಹಿತಕ್ಕಾಗಿಯೇ ಶ್ರಮಿಸುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಅಭಿವೃದ್ಧಿಗೆ ಸಹಕರಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷ ಅರ್ಚನಾ ಕೋಗನೋಳೆ, ಬಬನ ಹವಲ್ದಾರ, ಸುಜಾತಾ ಚಗಳೆ, ಮಲಗೊಂಡ ಪಾಟೀಲ, ಮದುಕರ ಪಾಟೀಲ, ರಾಜೇಂದ್ರ ಸುತಾರ, ಪ್ರಕಾಶ ಕಾಂಬಳೆ, ದೀಪಾಲಿ ಪಾಟೀಲ, ಸುವರ್ಣಾ ಗುರವ, ಸಂಜಯ ಗುರವ, ನೀತೀನ ಪಾಟೀಲ, ರೂಪಾಲಿ ಪಾಟೀಲ, ಪಕ್ಷದ ಸ್ಥಳೀಯ ಮುಖಂಡರು, ಗ್ರಾ.ಪಂ. ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೇಂದ್ರ

Related Articles

Back to top button