Kannada NewsKarnataka News

ಪ್ರತಿಯೊಬ್ಬರಲ್ಲಿ  ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ -ಡಾ ವಿಜಯಲಕ್ಷ್ಮಿ ಬಾಳೇಕುಂದ್ರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ; ಯಾರಿಗೂ ಕೆಟ್ಟದ್ದನ್ನು ಮಾಡದಿರುವುದು ಮತ್ತು ಪ್ರತಿಯೊಬ್ಬರಲ್ಲೂ ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ ಈ ರೀತಿಯ ಅಧ್ಯಾತ್ಮ ಜೀವನವನ್ನು ಯಾರು ನಡೆಸುತ್ತಾರೋ ಅವರು ನಿರೋಗಿ ಆಗಿರುತ್ತಾರೆ ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ಮಕ್ಕಳ ಹೃದಯ ರೋಗ ತಜ್ಞೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಹೇಳಿದರು .
ಅವರು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ” ಆತ್ಮ ಸ್ವಾಸ್ಥ್ಯ ಶ್ರೀ”
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು .

ಯಾರು ಅತಿಯಾದ ಆಸೆ ಮತ್ತು ಕಾಮನೆಗಳನ್ನು ಹೊಂದಿರುತ್ತಾರೋ ಅವರಿಗೆ ಸಹಜವಾಗಿ ಕೋಪ ತಾಪ ಹುಟ್ಟುತ್ತದೆ ಆದ್ದರಿಂದಲೇ ಮೆದುಳಿನಲ್ಲಿ ಕ್ರಿಯೆ ನಡೆದು ಆರೋಗ್ಯ ಹದಗೆಡುತ್ತದೆ
ಆದ್ದರಿಂದ ಕೋಪತಾಪಗಳಿಂದ ದೂರವಾಗಿ ಸಮಾಧಾನವಾಗಿರಬೇಕು ಎಂದು ಇಂದು ವಿಜ್ಞಾನ
ಹೇಳುವುದನ್ನು ಬಹಳ ಹಿಂದೆಯೇ ಶರಣೆ ಅಕ್ಕಮಹಾದೇವಿ ಹೇಳಿದ್ದಳು ಎಂದು ಅವರು ಹೇಳಿದರು .

ಎಲ್ಲ ರೋಗಗಳಿಗೆ ಮನಸ್ಸೇ ಮೂಲ ಪರಸ್ಪರರನ್ನು ದೂಷಿಸುವುದನ್ನು ಬಿಡಬೇಕು ಮನಸ್ಸನ್ನು
ಶಾಂತವಾಗಿರಬೇಕು ಮನಸ್ಸನ್ನು ಅಧ್ಯಾತ್ಮದತ್ತ ಸಮರ್ಪಣ ಮಾಡಿಕೊಳ್ಳಬೇಕು ಅದರಿಂದ ದೇಹದ
ಚೈತನ್ಯ ಹೆಚ್ಚುತ್ತದೆ .  ಪ್ರತಿಯೊಬ್ಬರಲ್ಲೂ ಪರಮಾತ್ಮನನ್ನು ಕಾಣಬೇಕು ಯಾರಿಗೂ
ಕೆಟ್ಟದ್ದನ್ನು ಮಾಡದೆ ಇರಬೇಕು ಶರೀರ ಬೆಳೆಸುವ ಬದಲು ಅದನ್ನು ಕಾಪಾಡಿಕೊಳ್ಳಬೇಕು
ಅದನ್ನು ಕಾಪಾಡಿಕೊಳ್ಳಬೇಕೆಂದರೆ ಮನಸ್ಸನ್ನು ಕೆಡಿಸಿಕೊಳ್ಳದೆ
ಶಾಂತವಾಗಿಟ್ಟುಕೊಳ್ಳಬೇಕು ಅದೇ ಆಧ್ಯಾತ್ಮ ಎಂದು ಅವರು ಹೇಳಿದರು .
ಹದಿನೈದು ದಿನದ ಮಗುವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಉಪಚರಿಸಿದ್ದು 9 ಸಾವಿರ ಮಕ್ಕಳಿಗೆ
ಶಸ್ತ್ರಚಿಕಿತ್ಸೆ ಇಲ್ಲದೆ ಉಪಚಾರ ಮಾಡಿದ್ದು ಎಲ್ಲವೂ ಭಗವಂತನ ಇಚ್ಛೆ. 7ವಿಶ್ವ
ದಾಖಲೆಗಳನ್ನು ನಿರ್ಮಾಣ ಮಾಡಿದ್ದು ಕೂಡ ಅಧ್ಯಾತ್ಮದ ಶಕ್ತಿ ಎಂದು ಡಾ ವಿಜಯಲಕ್ಷ್ಮಿ
ಬಾಳೆಕುಂದ್ರಿ ಹೇಳಿದರು .
ಅಧ್ಯಾತ್ಮದಲ್ಲಿ ಇರುವ ಶಕ್ತಿ ಬೇರೆ ಯಾವುದರಲ್ಲೂ ಇಲ್ಲ ಅಹಂಕಾರವನ್ನು ಬಿಟ್ಟು
ಅಂತಕರಣದಿಂದ ಜೀವನ ನಡೆಸಿದರೆ ಯಾವ ರೋಗವೂ ಬಾರದು ಆತ್ಮಸಾಕ್ಷಿ ಇದ್ದಲ್ಲಿ ಕೆಟ್ಟ
ವಿಚಾರ ಇರುವುದಿಲ್ಲ ಭಗವಂತನ ಭಕ್ತರ ಆದಾಗ ಜೀವನ ಸುಂದರ ಮತ್ತು ಸುಖಕರವಾಗಿರುತ್ತದೆ
ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಬೇಕು. ಸ್ವಾರ್ಥರಹಿತ ಸೇವೆ ಈ ಅಧ್ಯಾತ್ಮ ಅದನ್ನು
ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ
ಎಂದು ಅವರು ಹೇಳಿದರು .
ನಿವೃತ್ತ ಪ್ರಾಚಾರ್ಯ ಡಾ. ರಾಜಶೇಖರ ಪಾಟೀಲ್  ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು .
ಶ್ರೀ ಮಠದಿಂದ ಕೊಡಮಾಡುವ ಪ್ರಸಾದ ಶ್ರೀ ಗೌರವ ಪ್ರಶಸ್ತಿಯನ್ನು ಅಶೋಕ ಮಳಗಲಿ, ಬೆಳಗಾವಿ
ಬಿ ಎ ಪಾಟೀಲ್, ಕಾಗವಾಡ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಅಥಣಿಯ ಅನಂತ ಕುಲಕರ್ಣಿ ಹಾಗೂ ಬೆಳಗಾವಿಯ ಡಾ ಗುರುದೇವಿ ಹುಲೆಪ್ಪನವರಮಠ ಅವರಿಗೆ ನೀಡಿ ಗೌರವಿಸಲಾಯಿತು .
ಸಾಹಿತಿ ಜ್ಯೋತಿ ಬದಾಮಿ ಅವರು ಬರೆದ ಪರಿಕ್ರಮ ಕೈಲಾಶ ಮಾನಸ ಮಡಿಲಲ್ಲಿ
ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು .
ಬೆಳಗಾವಿ ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಅಭಿಯಂತ ಪಿ ಎಂ ಪಾಟೀಲ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ರುದ್ರಾಕ್ಷಿ ಮಠದ ಪ್ರಸಾದ ನಿಲಯದ ಹಳೆಯ
ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರೊ ಎಂ ಆರ್ ಉಳ್ಳೇಗಡ್ಡಿ ವಹಿಸಿದ್ದರು. ಗದುಗಿನ
ಶ್ರೀ ಜಗದ್ಗುರು ಶಿವಾನಂದ ಮಠದ ಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವಾನಂದ
ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು . ಬೆಳಗಾವಿ ಕಾರಂಜಿಮಠದ
ಗುರುಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು . ಬೆಳಗಾವಿ
ರುದ್ರಾಕ್ಷಿಮಠದ ಪೀಠಾಧಿಪತಿ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಮತ್ತು ಅಥಣಿಯ ಶ್ರೀ
ಪ್ರಭು ಚನ್ನಬಸವ ಶ್ರೀಗಳು  ಸಮಾರಂಭದ ಸಾನಿಧ್ಯದಲ್ಲಿ ಉಪಸ್ಥಿತರಿದ್ದರು . ಪೂಜ್ಯ
ಮಹಾಂತದೇವರು ಮತ್ತು ಪ್ರೊ ಸಿ ಜಿ ಮಠಪತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು .

ಮಹಾತ್ಮರ ಚರಿತಾಮೃತ ” ಅಹಂಕಾರ ನಿರಸನದ ವಿನಮ್ರ ಅಭಿವ್ಯಕ್ತಿ -ಡಾ.ವಿ.ಎಸ್ ಮಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button