ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಂದ ಏ.9 ರಂದು ಬೆಳಗ್ಗೆ 10 ಗಂಟೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅನ್ವೇಕರ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಶಶಿಧರ ನಾಡಗೌಡ, ಜಿಲ್ಲಾ ಸ್ವೀಪ್ ಸಹಾಯಕ ಅಧಿಕಾರಿ ರವಿ ಭಜಂತ್ರಿ ಜಾಥಾಗೆ ಚಾಲನೆ ನೀಡಿದರು.
ನಾಥ ಪೈ ವೃತ್ತದಿಂದ ಪ್ರಾರಂಭವಾದ ಜಾಥಾ ವಡಗಾವಿ ರಸ್ತೆ ಮೂಲಕ ಯಳ್ಳೂರ ಕ್ರಾಸ್, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಮಾರ್ಗವಾಗಿ ಸಂಚರಿಸಿ ನಾಥ ಪೈ ಸರ್ಕಲ್ನಲ್ಲಿ ಮುಕ್ತಾಯಗೊಂಡಿತು.
ಜಾಥಾದಲ್ಲಿ ಸಿ-ವಿಜಿಲ್ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಿ.ಜಿ. ನಾಗೇಶ, ಮಹಾಂತೇಶ ಚಿವಟಗುಂಡಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಬಿ. ರಂಗಯ್ಯ, ತಾಲೂಕ ಯೋಜನಾಧಿಕಾರಿ ಪಿ.ಪಿ. ದೇಶಪಾಂಡೆ, ಜಿಪಂ ಲೆಕ್ಕ ಅಧೀಕ್ಷಕ ಎ.ಪಿ. ಬಸನಾಳ ಉಪಸ್ಥಿತರಿದ್ದರು. ಜಾಥಾದಲ್ಲಿ ಸುಮಾರು 300 ಜನ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ