Latest

ಮಗುವನ್ನು ನದಿಗೆಸೆದು ತಾಯಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಮಂಡ್ಯ: ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಗೆ ಮಗುವನ್ನು ಎಸೆದು ತಾಯಿ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೌಟುಂಬಿಕ ಕಲಹವೇ ಘಟನೆಗೆ ಕಾರಣವೆನ್ನಲಾಗಿದ್ದು, 4 ವರ್ಷದ ಹಿಂದೆ ಆಕೆಯ ವಿವಾಹವಾಗಿತ್ತು.   ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಭಾರ್ಗವಿ(32) ಮತ್ತು ದೀಕ್ಷಾ(03)ಆತ್ಮಹತ್ಯೆ ಮಾಡಿಕೊಂಡವರು.

Home add -Advt

ಶ್ರೀರಂಗಪಟ್ಟಣ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಭಾರ್ಗವಿಯನ್ನು ಲಕ್ಷ್ಮೀಸಾಗರದ ಪ್ರದೀಪ್ ಕುಮಾರ್ ಗೆ 4 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ನಿನ್ನೆ ಸಂಜೆ ಮಗುವಿನೊಂದಿಗೆ ಗೋಸಾಯ್ ಘಾಟ್ ಗೆ ಬಂದಿದ್ದು ರಾತ್ರಿ ನದಿ ಸಮೀಪ ಮೊಬೈಲ್ ಇಟ್ಟು ಚಪ್ಪಲಿ ಬಿಟ್ಟು ಮಗುವನ್ನು ನದಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನದಿ ದಡದಲ್ಲಿ ತಾಯಿ ಮಗುವಿನ‌ ಶವ ತೇಲುತ್ತಿದ್ದನ್ನು ಕಂಡ‌ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ ಅಭಿವೃದ್ದಿಗಾಗಿ ರಾಜ್ಯ/ಕೇಂದ್ರ ಸರ್ಕಾರಗಳ 50:50 ವೆಚ್ಚಕ್ಕೆ ಕ್ರಮ

Related Articles

Back to top button